ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನವೇ ತಡವಾಗಿ ಸಂಚರಿಸಿದ ರೈಲು

Last Updated 18 ಅಕ್ಟೋಬರ್ 2019, 13:21 IST
ಅಕ್ಷರ ಗಾತ್ರ

ಹೊಸಪೇಟೆ: ಹರಿಹರ–ಕೊಟ್ಟೂರು–ಹೊಸಪೇಟೆ ಪ್ರಯಾಣಿಕರ ರೈಲು ಮೊದಲ ದಿನವೇ ನಿಗದಿತ ಸಮಯಕ್ಕಿಂತ ವಿಳಂಬವಾಗಿ ಸಂಚರಿಸಿತು.

ನಿಗದಿತ ಸಮಯ ಬೆಳಿಗ್ಗೆ 7.20ಕ್ಕೆ ಹರಿಹರದಿಂದ ರೈಲು ಸಂಚಾರ ಆರಂಭಿಸಿದೆ. ಆದರೆ, ಮಧ್ಯಾಹ್ನ 12.10ರ ಬದಲಾಗಿ 12.50 ನಿಮಿಷಕ್ಕೆ ನಗರ ನಿಲ್ದಾಣಕ್ಕೆ ಬಂದು ಸೇರಿದೆ. ಮಧ್ಯಾಹ್ನ 12.55ಕ್ಕೆ ನಗರದಿಂದ ಹೊರಡಬೇಕಿದ್ದ ರೈಲು ಮಧ್ಯಾಹ್ನ 1.40 ನಿಮಿಷಕ್ಕೆ ಪಯಣ ಬೆಳೆಸಿದೆ.

ಮೊದಲ ದಿನವೇ ರೈಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಕೆಲಸದ ನಿಮಿತ್ತ ರೈಲಿನಲ್ಲಿ ಪಯಣ ಬೆಳೆಸಿದರೆ, ಕೆಲವರು ಹೊಸ ಮಾರ್ಗದಲ್ಲಿ ಒಮ್ಮೆ ಸುತ್ತಾಡಲೆಂದು ಕುಟುಂಬ ಸದಸ್ಯರು, ಗೆಳೆಯರೊಂದಿಗೆ ಬಂದಿದ್ದರು.

‘ಸುಮಾರು 30 ವರ್ಷಗಳ ಹಿಂದೆ ಈ ಮಾರ್ಗದಲ್ಲಿ ಮೀಟರ್‌ಗೇಜ್‌ ಇದ್ದಾಗ ರೈಲಿನಲ್ಲಿ ಓಡಾಡಿದ್ದೆ. ಅದಾದ ನಂತರ ಈಗ ಕೊಟ್ಟೂರಿನಿಂದ ಇಲ್ಲಿಗೆ ಬಂದಿರುವೆ. ಪುನಃ ಊರಿಗೆ ಇದೇ ರೈಲಿನಲ್ಲಿ ಹೋಗುವೆ. ರೈಲು ಸಂಚಾರದಿಂದ ಬಹಳ ಖುಷಿಯಾಗಿದೆ. ಕೊಟ್ಟೂರೇಶ್ವರನ ದರ್ಶನ, ಹೊಸಪೇಟೆಯಲ್ಲಿ ಕಚೇರಿ ಕೆಲಸಕ್ಕೆ ಹೋಗಿ ಬರಲು ಸಾಕಷ್ಟು ಅನುಕೂಲವಾಗಿದೆ’ ಎಂದು ಕೊಟ್ಟೂರು ನಿವಾಸಿ ಬಸವರಾಜ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT