ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪನ ಮುಖೇನ ಹಕ್ಕೊತ್ತಾಯ

ಕಬ್ಬು ಬೆಳೆಗಾರರ ಸಮಸ್ಯೆ ಮೇಲೆ ಬೆಳಕು; ಕಾರ್ಖಾನೆ ಆರಂಭಕ್ಕೆ ಆಗ್ರಹ
Last Updated 5 ಸೆಪ್ಟೆಂಬರ್ 2019, 12:34 IST
ಅಕ್ಷರ ಗಾತ್ರ

ಹೊಸಪೇಟೆ: ಹಂಪಿ ರಸ್ತೆಯ ವೇಣುಗೋಪಾಲ ಕಾಲೊನಿಯಲ್ಲಿ ಏಕದಂತ ಬಾಲಕರ ಸಂಘವು ಪ್ರತಿಷ್ಠಾಪಿಸಿರುವ ಗಣಪ ಕಬ್ಬು ಬೆಳೆಗಾರರ ಸಮಸ್ಯೆ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿದೆ.

ಬಾಗಿಲು ಮುಚ್ಚಿರುವ ನಗರದ ಐ.ಎಸ್.ಆರ್‌. ಸಕ್ಕರೆ ಕಾರ್ಖಾನೆ ಮಾದರಿ ನಿರ್ಮಿಸಲಾಗಿದೆ. ಅದರ ಮುಂಭಾಗದಲ್ಲಿ ಗಣಪನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅದರ ಸುತ್ತಲೂ ರೈತರು, ಎತ್ತಿನ ಬಂಡಿ, ಕಬ್ಬು ಇಡಲಾಗಿದೆ. ಕಬ್ಬು ಬೆಳೆಗಾರರು, ‘ಕಾರ್ಖಾನೆ ಆರಂಭಿಸಿ’, ‘ನಮ್ಮ ಬಾಕಿ ಹಣ ಕೊಡಿ’, ‘ನಮ್ಮನ್ನು ಉಳಿಸಿ’, ‘ನಮ್ಮ ಸಮಸ್ಯೆಗೆ ಪರಿಹಾರ ಕೊಡಿಸೋರು ಯಾರು?’ ಎಂಬ ಬರಹವುಳ ಫಲಕಗಳನ್ನು ಹಿಡಿದು ಕುಳಿತಿದ್ದಾರೆ.

‘ತಾಲ್ಲೂಕಿನಲ್ಲಿ ಸಾಕಷ್ಟು ರೈತರು ಕಬ್ಬು ಬೆಳೆಯುತ್ತಾರೆ. ಕಾರ್ಖಾನೆ ಮುಚ್ಚಿರುವುದರಿಂದ ಅನೇಕ ರೈತರಿಗೆ ಸಮಸ್ಯೆಯಾಗುತ್ತಿದೆ. ಅವರ ಬಾಕಿ ಹಣವೂ ಕೊಟ್ಟಿಲ್ಲ. ಕಬ್ಬು ನುರಿಸುತ್ತಿಲ್ಲ. ಅವರು ಎದುರಿಸುತ್ತಿರುವ ಸಮಸ್ಯೆಯನ್ನು ಆಡಳಿತಶಾಹಿಗೆ ಮನದಟ್ಟು ಮಾಡಲು ಈ ವಿನೂತನ ಪ್ರಯೋಗ ಮಾಡಿದ್ದೇವೆ. ಎಲ್ಲ ಸಂಘದ ಸದಸ್ಯರು ಹಣ ಹಾಕಿ ಈ ಮಾದರಿ ಮಾಡಿದ್ದೇವೆ. ಗಣಪನ ಮೂರ್ತಿಗೆ ಮಾಜಿ ನಗರಸಭೆ ಸದಸ್ಯ ವೇಣುಗೋಪಾಲ ಹಣ ಕೊಟ್ಟಿದ್ದಾರೆ’ ಎಂದು ಸಂಘದಸದಸ್ಯ ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂತ್ರಸ್ತರಿಗೆ ಪ್ರಾರ್ಥನೆ:ನಗರದ ದೇವಾಂಗಪೇಟೆಯ ಪರಗಿ ಲೈನ್‌ನಲ್ಲಿ ಪ್ರತಿಷ್ಠಾಪಿಸಿರುವ ಗಣಪ, ಹೋಮ ಹವನ ಮಾಡುತ್ತಿರುವ ಭಂಗಿಯಲ್ಲಿದೆ. ಗಣಪನ ಸುತ್ತಲೂ ಋಷಿಮುನಿಗಳಿದ್ದು, ಅವರು ಅದರಲ್ಲಿ ಪಾಲ್ಗೊಂಡಿದ್ದಾರೆ. ‘ನೆರೆ ಹಾವಳಿಯಿಂದ ಸಂಕಷ್ಟಕ್ಕೊಳಗಾದ ರಾಜ್ಯದ ಜನರಿಗೆ ಆ ದೇವರು ಒಳ್ಳೆಯದು ಮಾಡಲಿ’ ಎಂದು ಹಾರೈಸಿ ಹೋಮ ಮಾಡುತ್ತಿದ್ದಾರೆ. ಇದು ಕೂಡ ಜನರ ಗಮನ ಸೆಳೆಯುತ್ತಿದೆ.

33 ಅಡಿ ಮೂರ್ತಿ:ನಗರದ ಟಿ.ಬಿ. ಡ್ಯಾಂ ಗಣೇಶ ಮಂಡಳಿಯವರು 33 ಅಡಿ ಎತ್ತರದ ಗಣಪನ ಮೂರ್ತಿ ಪ್ರತಿಷ್ಠಾಪಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಕೋಲ್ಕತ್ತದ ಕಲಾವಿದರು ನಗರಕ್ಕೆ ಬಂದು, ಸತತ ಮೂರು ತಿಂಗಳು ಶ್ರಮ ವಹಿಸಿ ಈ ಮೂರ್ತಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT