ಸೋಮವಾರ, ಏಪ್ರಿಲ್ 19, 2021
23 °C

ಹನುಮ ಮಂದಿರ ಸಂಕಲ್ಪ ರಥಯಾತ್ರೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯನಗರ (ಹೊಸಪೇಟೆ): ಹಂಪಿಗೆ ಹೊಂದಿಕೊಂಡಿರುವ ಕಿಷ್ಕಿಂದೆಯಲ್ಲಿ ಹನುಮ ಮಂದಿರ ನಿರ್ಮಾಣಕ್ಕೆ ಕೈಗೊಂಡಿರುವ ಸಂಕಲ್ಪ ರಥಯಾತ್ರೆಗೆ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಸೋಮವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿ, ‘ಹನುಮ ಮಂದಿರ ನಿರ್ಮಾಣಕ್ಕಾಗಿ 12 ವರ್ಷಗಳ ಸಂಕಲ್ಪ ರಥಯಾತ್ರೆಗೆ ಶ್ರದ್ಧಾ, ಭಕ್ತಿಯಿಂದ ಚಾಲನೆ ಕೊಡಲಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುತ್ತಿರುವಂತೆ ರಾಮ ಭಕ್ತ ಹನುಮನ ಮಂದಿರವನ್ನು ಜನ್ಮಸ್ಥಳ ಕಿಷ್ಕಿಂದೆಯಲ್ಲಿ ನಿರ್ಮಿಸಲು ಸಂಕಲ್ಪ ಮಾಡಲಾಗಿದೆ’ ಎಂದು ತಿಳಿಸಿದರು.

‘ಅಯೋಧ್ಯೆ ಹಾಗೂ ಕಿಷ್ಕಿಂದೆ ಎರಡೂ ಹಿಂದೂಗಳ ಪವಿತ್ರ ಕ್ಷೇತ್ರಗಳಾಗಿವೆ. ಕಿಷ್ಕಿಂದೆಯಲ್ಲಿ ಮಂದಿರ ನಿರ್ಮಾಣದ ಜತೆಗೆ ಹನುಮನ ಭವ್ಯ, ದಿವ್ಯ ಮೂರ್ತಿ ಪ್ರತಿಷ್ಠಾಪಿಸುವ ಉದ್ದೇಶವಿದೆ’ ಎಂದು ಹೇಳಿದರು. ರಥ ಮೊದಲ ದಿನ ಕಮಲಾಪುರ ಮಾರ್ಗವಾಗಿ ಅಂಜನಾದ್ರಿ ತಲುಪಿತು. ಪ್ರಮೋದ್ ಸ್ವಾಮೀಜಿ, ಪ್ರಸನ್ನ ಸ್ವಾಮೀಜಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.