4

300 ಜನರಿಗೆ ಉಚಿತ ಶ್ರವಣ ಚಿಕಿತ್ಸೆ

Published:
Updated:
ಹೊಸಪೇಟೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಚಿತ ಶ್ರವಣ ದೋಷ ತಪಾಸಣೆಯಲ್ಲಿ ಪಾಲ್ಗೊಂಡಿದ್ದ ನಾಗರಿಕರು

ಹೊಸಪೇಟೆ: ನಗರದ ರೋಟರಿ ಕ್ಲಬ್‌ನಲ್ಲಿ ಗುರುವಾರ ಉಚಿತ ಶ್ರವಣ ದೋಷ ತಪಾಸಣೆ ಹಾಗೂ ಅದರ ಸಾಧನ ವಿತರಣೆ ಕಾರ್ಯಕ್ರಮ ನಡೆಯಿತು.

300 ಜನ ಹೆಸರು ನೋಂದಣಿ ಮಾಡಿಸಿಕೊಂಡು ಪಾಲ್ಗೊಂಡಿದ್ದರು. ಡಾ. ಮಹದೇವ ಪ್ರಸಾದ್‌ ನೇತೃತ್ವದ ತಂಡವು 150 ಜನರ ತಪಾಸಣೆ ಮಾಡಿ, ಅಗತ್ಯ ಚಿಕಿತ್ಸೆ ನೀಡಿತು. ಇನ್ನುಳಿದವರಿಗೆ ಶ್ರವಣ ಸಾಧನ ವಿತರಿಸಲಾಯಿತು. ಮುನೀರ್‌ ಮೋಟಾರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಅಶೋಕ್‌ ಲೆಲ್ಯಾಂಡ್‌ ಶ್ರವಣ ಸಾಧನಗಳ ಖರ್ಚು ಭರಿಸಿದರು.

ಇದಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ರೋಟರಿ ಕ್ಲಬ್‌ ಅಧ್ಯಕ್ಷ ಗುರುನಾಥ ಪತ್ತಿಕೊಂಡ, ಇನ್ನರ್‌ ವೀಲ್‌ ಕ್ಲಬ್‌ ಅಧ್ಯಕ್ಷೆ ನಂದಿನಿ ಚಿಕ್ಕಮಠ, ಕಾರ್ಯಕ್ರಮದ ಸಂಯೋಜಕ ಅಬ್ದುಲ್‌ ಹಕ್‌ ಸೇಠ್‌, ಮುನೀರ್‌ ಮೋಟಾರ್ಸ್‌ನ ಅಲೀಂ ಸಾಬ್‌, ಅಶೋಕ್‌ ಲೆಲ್ಯಾಂಡ್‌ನ ಪ್ರಶಾಂತ್‌, ರೋಟರಿಯ ಪಿ. ಮುನಿವಾಸುದೇವ ರೆಡ್ಡಿ ಇದ್ದರು.

ರೋಟರಿ ಕ್ಲಬ್‌, ಇನ್ನರ್‌ ವೀಲ್‌ ಕ್ಲಬ್‌ ಹಾಗೂ ಮೈಸೂರಿನ ಮಾನಸ ಗಂಗೋತ್ರಿ ಸಂಸ್ಥೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !