ನೆರೆ ಸಂತ್ರಸ್ತರ ಕೈ ಹಿಡಿಯಿರಿ

7
ವಿವಿಧ ಸಂಘ ಸಂಸ್ಥೆಗಳಿಂದ ದೇಣಿಗೆ, ಅಗತ್ಯ ವಸ್ತುಗಳ ಸಂಗ್ರಹ

ನೆರೆ ಸಂತ್ರಸ್ತರ ಕೈ ಹಿಡಿಯಿರಿ

Published:
Updated:
Deccan Herald

ಹೊಸಪೇಟೆ: ಕೇರಳ ಮತ್ತು ಕೊಡಗು ಜಿಲ್ಲೆಯಲ್ಲಿ ನೆರೆಯಿಂದ ಸಂತ್ರಸ್ತರಾದವರಿಗೆ ಸಹಾಯಹಸ್ತ ಚಾಚಲು ಇಲ್ಲಿನ ವಿವಿಧ ಸಂಘ ಸಂಸ್ಥೆಗಳು ಭಾನುವಾರ ನಗರದಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದವು.

ಯುವಸೇನಾ ಶಕ್ತಿ:
ಸಂಘಟನೆಯು ‘ಪವರ್‌ ಆಫ್‌ ಗಿವಿಂಗ್‌’ ಹೆಸರಿನಲ್ಲಿ ಇಲ್ಲಿನ ನಗರಸಭೆ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜನ ಸ್ವಯಂಪ್ರೇರಣೆಯಿಂದ ಬಂದು ದಿನಬಳಕೆಯ ಅಗತ್ಯ ವಸ್ತುಗಳಾದ ಬೆಡ್‌ಶೀಟ್‌, ಪೇಸ್ಟ್‌, ಟೂತ್‌ಬ್ರಶ್‌, ಹೊದಿಕೆ, ಬಿಸ್ಕತ್‌, ಸ್ಯಾನಿಟರಿ ನ್ಯಾಪ್‌ಕಿನ್‌ ಸೇರಿದಂತೆ ಇತರೆ ವಸ್ತುಗಳನ್ನು ದೇಣಿಗೆ ರೂಪದಲ್ಲಿ ನೀಡಿದರು.

‘ಇದೇ 24ರ ವರೆಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಏನು ಬೇಕಾದರೂ ಬಂದು ದೇಣಿಗೆ ನೀಡಬಹುದು. ಕೇರಳ ಹಾಗೂ ಕೊಡಗು ಜಿಲ್ಲೆಯಲ್ಲಿ ಲಕ್ಷಾಂತರ ಜನ ಬೀದಿ ಪಾಲಾಗಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಅವರ ನೆರವಿಗೆ ಬರುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ಜನರಿಂದ ಸಂಗ್ರಹಿಸಿದ ವಸ್ತುಗಳನ್ನು ನಗರಸಭೆ ಮೂಲಕ ಅಲ್ಲಿನ ಜಿಲ್ಲಾ ಆಡಳಿತಕ್ಕೆ ಹಸ್ತಾಂತರ ಮಾಡಲಾಗುವುದು’ ಎಂದು ಸಂಘಟನೆಯ ಅಧ್ಯಕ್ಷ ಶ್ರೀಧರ ನಾಯ್ಡು ತಿಳಿಸಿದರು.

ಚಂದ್ರ ಮೋಹನ್‌, ಕಲಂದರ್‌, ವಂಶಿ ಸಿಂಗ್‌, ಮೊಹಮ್ಮದ್‌ ಅಲಿ, ಶ್ರೀನಿವಾಸ, ವೀರೇಶ್‌, ಪ್ರಫುಲ್‌, ಸುಪ್ರೀತ್‌ ಇದ್ದರು.

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್‌ (ಡಿ.ವೈ.ಎಫ್‌.ಐ.):

ಸಂಘಟನೆಯ ಕಾರ್ಯಕರ್ತರು ನಗರದ ಪ್ರಮುಖ ಮಾರ್ಗಗಳಲ್ಲಿ ಓಡಾಡಿ ದೇಣಿಗೆ ಸಂಗ್ರಹಿಸಿದರು. ‘ಮನುಷ್ಯರಾಗಿ, ಸಂಕಷ್ಟದಲ್ಲಿರುವ ಇನ್ನೊಬ್ಬರ ನೆರವಿಗೆ ಬರೋಣ’ ಎಂದು ಘೋಷಣೆ ಕೂಗಿದರು.

ಡಿ.ವೈ.ಎಫ್‌.ಐ. ರಾಜ್ಯ ಘಟಕದ ಉಪಾಧ್ಯಕ್ಷ ಬಿಸಾಟಿ ಮಹೇಶ್‌, ಕಲ್ಯಾಣಯ್ಯ, ಕಿನ್ನಾಳ ಹನುಮಂತ, ಈಡಿಗರ ಮಂಜುನಾಥ, ಬಂಡೆ ತಿರುಕಪ್ಪ, ರಾಜ ಚಂದ್ರಶೇಖರ್‌, ಸೂರ್ಯಕಿರಣ, ಮಧು ನಾಯ್ಡು, ಮಾರುತಿ ಇದ್ದರು.

ತುಂಗಭದ್ರಾ ಫೋಟೊ ಮತ್ತು ವಿಡಿಯೊಗ್ರಾಫರ್ಸ್‌ ಅಸೋಸಿಯೇಶನ್‌:

ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಸುತ್ತಾಡಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದರು. ಅಧ್ಯಕ್ಷ ಸೋಮು, ತಯ್ಯಬ್, ಮಾರುತಿ ಪೂಜಾರ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !