ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ದಾಳಿ : ಎರಡು ಮೇಕೆ ಬಲಿ

Last Updated 4 ಜನವರಿ 2019, 13:47 IST
ಅಕ್ಷರ ಗಾತ್ರ

ತೋರಣಗಲ್ಲು: ಸಮೀಪದ ಕುರೆಕುಪ್ಪದ ಜಾನುವಾರ ಸಂವರ್ಧನಾ ತರಬೇತಿ ಕೇಂದ್ರದ ಸಮೀಪ ಗುರುವಾರ ರಾತ್ರಿ ರೇವಣಸಿದ್ದಪ್ಪ ಅವರ ಕುರಿ ಮಂದೆ ಮೇಲೆ ಎರಡು ಚಿರತೆಗಳು ದಾಳಿ ಮಾಡಿ ಎರಡು ಮೇಕೆಗಳನ್ನು ಕೊಂದು ಹಾಕಿವೆ.

ಕುರಿಗಾಹಿ ರೇವಣಸಿದ್ದಪ್ಪ ಮತ್ತು ಮರಿಸ್ವಾಮಿ ತಮ್ಮ ಕುರಿಗಳನ್ನು ಮೇಯಿಸಿಕೊಂಡು ರಾತ್ರಿ ಶಿವನಗೌಡ ಎಂಬುವರ ತೋಟದಲ್ಲಿ ವಾಸ್ತವ್ಯ ಹೂಡಿದ್ದರು. ಚಿರತೆಗಳು ಏಕಾಏಕಿ ಕುರಿ ಮಂದೆಯ ಮೇಲೆ ದಾಳಿಮಾಡಿ, ಮೇಕೆಗಳ ರಕ್ತ ಹೀರಿವೆ. ಈ ವೇಳೆ ಕುರಿಗಾಹಿಗಳು ಕಿರುಚಾಡಿದ ಶಬ್ದಕ್ಕೆ ಚಿರತೆಗಳು ಹೆದರಿ ಮೇಕೆಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿವೆ.

ಮಂಗಳವಾರ ರಾತ್ರಿಯೂಕುರಿ ಮಂದೆಯ ಮೇಲೆ ದಾಳಿ ಮಾಡಿದ್ದ ಚಿರತೆ 6 ಕುರಿಗಳನ್ನು ಗಾಯಗೊಳಿಸಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದಾಳಿ ನಡೆದಿರುವುದು ಅಲ್ಲಿನ ಜನರ ಭಯಕ್ಕೆ ಕಾರಣವಾಗಿದೆ.ದಿನೇದಿನೇಹೆಚ್ಚುತ್ತಿರುವ ಚಿರತೆ ದಾಳಿಯಿಂದ ಪ್ರಾಣದ ಭಯ ಶುರುವಾಗಿದ್ದು, ಅರಣ್ಯ ಇಲಾಖೆಯವರು ಈ ಎರಡು ಚಿರತೆಗಳನ್ನು ತ್ವರಿತವಾಗಿ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಕುರಿಗಾಹಿಗಳು ಆಗ್ರಹಿದರು.

ದರೋಜಿ ಕರಡಿ ಧಾಮದ ಉಪವಲಯ ಅರಣ್ಯಾಧಿಕಾರಿ ದೇವರಾಜ, ಬಳ್ಳಾರಿ ವಲಯದ ಅರಣ್ಯ ರಕ್ಷಕ ಮಾರುತಿ, ಗ್ರಾಮದ ಉಪ್ಪಾರು ದ್ಯಾವಣ್ಣ, ಈಶ್ವರ, ಶಿವನಗೌಡ ಇದ್ದರು.

ಬೆಟ್ಟದ ಅಂಚಿನ ಗ್ರಾಮಗಳಿಗೆ ಇತ್ತೀಚಿಗೆ ಚಿರತೆಗಳ ಹಾವಳಿ ಜಾಸ್ತಿಯಾಗಿ, ದಿನ ನಿತ್ಯ ಸಾರ್ವಜನಿಕರಿಗೆ ತೊಂದರೆಯನ್ನು ಉಂಟುಮಾಡುತ್ತಿವೆ. ಬೋನಿಗೆ ಬಿದ್ದ ನಾಲ್ಕು ಚಿರತೆಗಳನ್ನು ಮೈಸೂರು ಮೃಗಾಲಯಕ್ಕೆ ಕಳಿಸಲಾಗಿದೆ. ಈ ಪ್ರದೇಶದಲ್ಲಿ ಚಿರತೆಗಳ ಸೆರೆಗೆ ಬೋನುಗಳನ್ನು ಅಳವಡಿಸಲಾಗುವುದು, ಸತ್ತ ಮೇಕೆಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುತ್ತೇವೆ.

ಭಾಸ್ಕರ್, ದರೋಜಿ ಕರಡಿ ಧಾಮದ ವಲಯ ಅರಣ್ಯಾಧಿಕಾರಿ ಕುರೆಕುಪ್ಪ ಸಿ.ಫಾರ್ಮನ ಹಿಂಭಾಗದಲ್ಲಿ ದಟ್ಟವಾಗಿ ಜಾಲಿಗಿಡಗಳು ಬೆಳದಿವೆ ಅಲ್ಲದೆ ಇದು ಕಾಡು ಪ್ರಾಣಿಗಳ ವಾಸ ಸ್ಥಾನವಾಗಿದೆ. ಸಂಬಧಿಸಿದವರು ತಕ್ಷಣ ಜಾಲಿ ಗಿಡಗಳನ್ನು ತೆರುವುಗೊಳಿಸಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT