ಲೋಕೇಶ್‌ ನೂತನ ಉಪವಿಭಾಗಾಧಿಕಾರಿ

7

ಲೋಕೇಶ್‌ ನೂತನ ಉಪವಿಭಾಗಾಧಿಕಾರಿ

Published:
Updated:
Deccan Herald

ಹೊಸಪೇಟೆ: ಪಿ.ಎನ್‌. ಲೋಕೇಶ್‌ ಅವರನ್ನು ಇಲ್ಲಿನ ಉಪವಿಭಾಗಾಧಿಕಾರಿಯಾಗಿ ವರ್ಗಾವಣೆ ನೇಮಕ ಸರ್ಕಾರ ಆದೇಶ ಹೊರಡಿಸಿದೆ.

ಲೋಕೇಶ್‌ ಅವರು ಹಾವೇರಿಯಲ್ಲಿ ಉಪವಿಭಾಗಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಹೊಸಪೇಟೆ ಉಪವಿಭಾಗಾಧಿಕಾರಿಯಾಗಿ ವರ್ಗಾವಣೆ ಮಾಡಿ ಬುಧವಾರ ಸರ್ಕಾರ ಆದೇಶ ಹೊರಡಿಸಿದೆ.

ಇಲ್ಲಿನ ಉಪವಿಭಾಗಾಧಿಕಾರಿಯಾಗಿದ್ದ ಗಾರ್ಗಿ ಜೈನ್‌ ಅವರನ್ನು ವರ್ಗಾವಣೆ ಮಾಡಿದ್ದು, ಸದ್ಯಕ್ಕೆ ಅವರಿಗೆ ಸ್ಥಳ ನಿಯೋಜನೆ ಮಾಡಿಲ್ಲ. ಮುನ್ಸಿಪಲ್‌ ಮೈದಾನದ ಅಂಚಿನಿಂದ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ್ದು, ಟಿ.ವಿ. ಚಾನೆಲ್‌ ವರದಿಗಾರನಿಗೆ ಎಚ್ಚರಿಕೆ ನೀಡಿದ್ದು ಹಾಗೂ ಇತ್ತೀಚೆಗೆ ಸರ್ಕಾರಿ ಕಾರನ್ನು ಸ್ವಂತಕ್ಕೆ ಬಳಸಿಕೊಂಡು, ಸಾರ್ವಜನಿಕರ ಟೀಕೆಗೆ ಗುರಿಯಾಗಿ ಸುದ್ದಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !