ಶುಕ್ರವಾರ, ಜೂನ್ 25, 2021
22 °C

ಬಳ್ಳಾರಿ: ರಿಯಾಯಿತಿ ದರದ ಆಕ್ಸಿಮೀಟರ್‌ಗಾಗಿ ಉದ್ದನೆ ಸಾಲು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ರಿಯಾಯಿತಿ ದರದಲ್ಲಿ ಪಲ್ಸ್ ಆಕ್ಸಿಮೀಟರ್, ಥರ್ಮಾ ಮೀಟರ್, ಎನ್ 95 ಮಾಸ್ಕ್ ಮತ್ತು ಸ್ಟೀಮರ್ ಅನ್ನು ಜೈನ್ ಯುವಕ ಸಂಘದಿಂದ ಖರೀದಿಸಲು ನಗರದ ಬಿಡಿಎಎ ಸಭಾಂಗಣ ಮುಂಭಾಗ ಬೆಳಿಗ್ಗೆಯೇ ನೂರಾರು ಮಂದಿ ಉದ್ದನೆಯ ಸಾಲಿನಲ್ಲಿ ನಿಂತಿದ್ದರು.

ಯುವಕ ಸಂಘವು ಆಕ್ಸಿಮೀಟರ್ ಅನ್ನು ₹ 450ಕ್ಕೆ, ಥರ್ಮಾ ಮೀಟರ್ ಹಾಗೂ ಸ್ಟೀಮರ್ ಅನ್ನು ತಲಾ ₹150ಕ್ಕೆ ಹಾಗೂ ಮಾಸ್ಕ್ ಅನ್ನು ತಲಾ ₹ 20ಕ್ಕೆ ಮಾರಾಟ ಮಾಡುವುದಾಗಿ ನೀಡಿದ್ದ ಪ್ರಕಟಣೆಯು ನಗರದ ನೂರಾರು ವಾಟ್ಸ್ ಅಪ್  ಗುಂಪುಗಳಲ್ಲಿ ಮಂಗಳವಾರ ಸಂಜೆಯಿಂದಲೇ ಹರಿದಾಡಿದ್ದರಿಂದ ಹೆಚ್ಚಿನ ಸಂಖ್ಯೆಯ ಜನ ನೆರೆದಿದ್ದರು.

ಶಾಸನ್ ಸೇವಾ ಗ್ರುಪ್ ನೆರವಿನೊಂದಿಗೆ ಸಂಘ ಸೇವಾ ಕಾರ್ಯವನ್ನು ಹಮ್ಮಿಕೊಂಡಿದ್ದು, ಹೆಚ್ಚುವರಿ ದರದ ಹಣವನ್ನು ಗ್ರೂಪ್ ಭರಿಸಲಿದೆ ಎಂದು ಸಂಘದ ಪ್ರಮುಖರಾದ ಅಕ್ಷತ್ ಜೈನ್ 'ಪ್ರಜಾವಾಣಿ'ಗೆ ತಿಳಿಸಿದರು.

ಬೆಳಿಗ್ಗೆ 6.30ಕ್ಕೆ ಶಾಸಕ ಜಿ.ಸೋಮಶೇಖರರೆಡ್ಡಿ ಸಾಂಕೇತಿಕವಾಗಿ ಗ್ರಾಹಕರೊಬ್ಬರಿಗೆ ಆಕ್ಸಿಮೀಟರ್ ನೀಡುವ ಮೂಲಕ ಮಾರಾಟಕ್ಕೆ ಚಾಲನೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು