ತೋರಣಗಲ್ಲಿನಲ್ಲಿ 17, ಕೊಟ್ಟೂರಲ್ಲಿ 9 ನಾಮ ನಾಮಪತ್ರ ಸಲ್ಲಿಕೆ

7

ತೋರಣಗಲ್ಲಿನಲ್ಲಿ 17, ಕೊಟ್ಟೂರಲ್ಲಿ 9 ನಾಮ ನಾಮಪತ್ರ ಸಲ್ಲಿಕೆ

Published:
Updated:
Deccan Herald

ತೋರಣಗಲ್ಲು: ಸಮೀಪದ ಕುಡಿತಿನಿ ಪಟ್ಟಣ ಪಂಚಾಯ್ತಿ ಚುನಾವಣೆಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಗುರುವಾರ 17 ನಾಮಪತ್ರಗಳನ್ನು ಸಲ್ಲಿಸಿದರು.

ವಾರ್ಡ್ ವಾರು ವಿವರ:

1- ವಿ.ದೇವಮ್ಮ, 3 -ಬುಡ್ಗ ಜಂಗಮ ಸೂರಿ, 4- ಊರುಣ್ಣಿ ಭೀಮೆಶ್, ಮೌಲಾಸಾಬ್ ಬಡಗಿ, ದೊಡ್ಡಬಸಪ್ಪ, 5 -ಬಿ. ಸ್ವಾಮಿ, ಕೆ.ಎಂ. ಹಾಲಪ್ಪ, 6– ನಿಂಗಮ್ಮ, ಗೀತ, 7 -ಬಸಮ್ಮ, 12 -ಸುಜಾತ, 13- ರಾಮಲಿಂಗಪ್ಪ, 15 –ರತ್ನಮ್ಮ, 16-ತಾಯಪ್ಪ, 17 -ಹನುಮಕ್ಕ, 18 -ಶಂಕ್ರಮ್ಮ, 19 -ಭಾರತಿ ನಾಮಪತ್ರ ಸಲ್ಲಿಸಿದ್ದಾರೆ.

ಒಟ್ಟು 19 ವಾರ್ಡ್ ಗಳಿದ್ದು, ಕನಿಷ್ಠ 500 ಜನ ಸಂಖ್ಯೆಗೆ ಒಂದರಂತೆ ಒಟ್ಟು 19 ಮತಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಪಟ್ಟಣದಲ್ಲಿ 13,137 ಮತದಾರರಿದ್ದಾರೆ. ಈ ಪೈಕಿ 6445 ಮಹಿಳೆಯರು, 6490 ಪುರುಷರಿದ್ದಾರೆ. ಪರಿಶಿಷ್ಟರಿಗೆ ₹500 ಮತ್ತು ಇತರೆ ಅಭ್ಯರ್ಥಿಗಳಿಗೆ ₹ 1 ಸಾವಿರ ಚುನಾವಣಾ ಠೇವಣಿ ಇಡಬೇಕು.

₹1 ಲಕ್ಷ ಚುನಾವಣಾ ವೆಚ್ಚ ನಿಗದಿಪಡಿಸಲಾಗಿದೆ. ಫಲಿತಾಂಶದ ಮುನ್ನಾ ದಿನ ಅಭ್ಯರ್ಥಿಗಳು ತಮ್ಮ ವೆಚ್ಚದ ವಿವರವನ್ನು ಸಲ್ಲಿಸಬೇಕು ಎಂದು ಚುನಾವಣಾಧಿಕಾರಿಗಳು ತಿಳಿಸಿದರು.

1ರಿಂದ 10ನೇ ವಾರ್ಡ್‌ವರೆಗೆ ಪಟ್ಟಣ ಪಂಚಾಯ್ತಿ ಕಚೇರಿ ಮತ್ತು 11ರಿಂದ 19ರವರೆಗೆ ಇಂದಿರಾ ನಗರದ ಪಶು ಚಿಕಿತ್ಸಾಲಯದಲ್ಲಿ ನಾಮಪತ್ರ ಸಲ್ಲಿಸಿದರು ಚುನಾವಣಾಧಿಕಾರಿ ಅಟ್ಟಪ್ಪ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ಶಿವಲಿಂಗರೆಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !