ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ–ಚಿಂತಾಕ್ರಾಂತ | ಪಕ್ಷಿಗಳಿಗೆ ಆಹಾರವಾದ ಪಪ್ಪಾಯ!

ಬೆಳೆ ನಿರ್ವಹಣೆಗೆ ಮಾಡಿದ ಖರ್ಚೂ ಕೈಸೇರದ ದುಃಸ್ಥಿತಿ
Last Updated 9 ಮೇ 2020, 9:36 IST
ಅಕ್ಷರ ಗಾತ್ರ

ಹೂವಿನಹಡಗಲಿ: ಲಾಕ್‌ಡೌನ್‌ನಿಂದ ಮಾರುಕಟ್ಟೆಗೆ ಸಾಗಿಸಲಾಗದೇ ಪಪ್ಪಾಯ ಗಿಡದಲ್ಲೇ ಕೊಳೆಯುತ್ತಿದೆ. ರೈತರು ಬೆಳೆದ ಹಣ್ಣುಗಳನ್ನು ಉಚಿತವಾಗಿ ಜನರಿಗೂ ಹಂಚುತ್ತಿದ್ದಾರೆ. ಪಕ್ಷಿಗಳಿಗೂ ಆಹಾರವಾಗುತ್ತಿದೆ.

ತಾಲ್ಲೂಕಿನ ಮುದೇನೂರಿನ ರೈತರಾದ ಮಲ್ಲನಕೆರೆ ಹನುಮಂತಪ್ಪ, ಮೈಲಾರಪ್ಪ ಸಹೋದರರು ಮೂರು ಎಕರೆಯಲ್ಲಿ ಪಪ್ಪಾಯ ಬೆಳೆದಿದ್ದಾರೆ. ಉತ್ತಮ ಇಳುವರಿ ಬಂದಿದೆ. ಲಾಕ್‌ಡೌನ್‌ನಿಂದಾಗಿ ಅದು ಕಟಾವಾಗದೇ ಗಿಡದಲ್ಲೇ ಉಳಿದಿದೆ.

ಮೂರು ಎಕರೆ ಪಪ್ಪಾಯ ಕೃಷಿಗೆ ಹನಿ ನೀರಾವರಿ ಸೇರಿದಂತೆ ₹2 ಲಕ್ಷ ಖರ್ಚು ಮಾಡಿದ್ದಾರೆ. ಎಕರೆಗೆ ಸರಾಸರಿ 30 ಟನ್ ಇಳುವರೀ ನಿರೀಕ್ಷಿಸಲಾಗಿತ್ತು. ಆದರೆ, ಅವರ ನಿರೀಕ್ಷೆ ಹುಸಿಯಾಗಿದೆ. ಇನ್ನೊಂದೆಡೆ ಸಾಲ ಬೆನ್ನೇರುವಂತೆ ಮಾಡಿದೆ. ಹನುಮಂತಪ್ಪ ಪ್ರಯೋಗ ಶಾಲೆಯಂತೆ ಮಿಶ್ರ ಬೆಳೆ ಬೆಳೆಯುತ್ತಾರೆ. 30-40 ಸೆಂಟ್ಸ್ ತುಂಡುಭೂಮಿಯಲ್ಲಿ ಬೀಜೋತ್ಪಾದನೆ ಮಾಡಿ ಲಕ್ಷಾಂತರ ಆದಾಯ ಗಳಿಸುತ್ತಾರೆ. ಆದರೆ, ಈ ಬಾರಿ ಅವರಿಗೆ ಕೊರೊನಾ ಸಂಕಟ ತಂದಿದೆ.

**

ನಮ್ಮದಲ್ಲದ ತಪ್ಪಿನಿಂದ ಲಕ್ಷಾಂತರ ನಷ್ಟ ಆಗಿದೆ. ಸರ್ಕಾರ ನಷ್ಟ ಪರಿಹಾರ ನೀಡಿ, ರೈತರ ನೆರವಿಗೆ ಬರಬೇಕು.
–ಹನುಮಂತಪ್ಪ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT