ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹ

7
ಅನರ್ಹರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ವಿತರಣೆ

ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹ

Published:
Updated:
Deccan Herald

ಬಳ್ಳಾರಿ: 'ಲಿಂಗಾಯತರಾದ ದೊಡ್ಡಯ್ಯ ಎಂಬುವವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಿದ ಕುರುಗೋಡಿನ ವಿಶೇಷ ತಹಶೀಲ್ದಾರ್‌ ಬಸವರಾಜ್‌ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿ ಹದಿಮೂರು ಸಂಘಟನೆಗಳ ನೂರಾರು ಮಂದಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಧರಣಿ ನಡೆಸಿದರು.

‘ಪರಿಶಿಷ್ಟ ಪಂಗಡಕ್ಕೆ ಸೇರಿದ 51 ಸಮುದಾಯಗಳ ಪೈಕಿ ವಾಲ್ಮೀಕಿ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಕೇಂದ್ರ ಸರ್ಕಾರ ನೀಡಿರುವ ಶೇ 7.5 ಔದ್ಯೋಗಿಕ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಎರಡೂವರೆ ದಶಕಗಳಿಂದ ಸತಾಯಿಸುತ್ತಿದೆ. ಇಂಥ ಸಂದರ್ಭದಲ್ಲೇ ಮೇಲ್ಜಾತಿಯವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಿರುವುದ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಪರಿಶಿಷ್ಟ ಜಾತಿ, ಪಂಗಡದ ಹೋರಾಟ ಸಮಿತಿ ಮುಖಂಡ ಜಿ.ರುದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ಅನರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಿರುವ ವಿಶೇಷ ತಹಶೀಲ್ದಾರ್‌, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಕಗರನ್ನು ಕೂಡಲೇ ಸೇವೆಯಿಂದ ಅಮಾನತ್ತುಗೊಳಿಸಬೇಕು. ಅನರ್ಹರಿಗೆ ನೀಡಿರುವ ಪ್ರಮಾಣಪತ್ರಗಳನ್ನು ಕೂಡಲೇ ರದ್ದುಪಡಿಸಬೇಕು. ಈ ಸಂಬಂಧ ಸಮಗ್ರ ತನಿಖೆ ನಡೆಸಬೇಕು’ ಎಂದರು.

ಮೆರವಣಿಗೆ: ಪ್ರತಿಭಟನೆಗೂ ಮುನ್ನ ನೂರಾರು ಮಂದಿ ಕುರಗೋಡು ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ವಾಹನಗಳನ್ನು ಮೆರವಣಿಗೆ ಬಂದರು.
ಜಿಲ್ಲಾ ವಾಲ್ಮೀಕಿ ನಾಯಕರ ವಿದ್ಯಾಭಿವೃದ್ಧಿ ಸಂಘ, ದಲಿತ ಹಕ್ಕುಗಳ ಮಾಹಿತಿ–ಕರ್ನಾಟಕ, ವೀರ ಸಿಂಧೂರ ಲಕ್ಷ್ಮಣ ಯುವಕರ ಸಂಘ, ಮಹರ್ಷಿ ವಾಲ್ಮೀಕಿ ನಾಯಕರ ಜಾಗೃತಿ ವೇದಿಕೆ, ವಾಲ್ಮೀಕಿ ನಾಯಕ ಮಹಾಸಭಾ, ವಾಲ್ಮೀಕಿ ಯುವ ಘರ್ಜನೆ ಸೇನೆ, ಏಕಲವ್ಯ ಯುವ ಪಡೆ, ವಾಲ್ಮೀಕಿ ರಕ್ಷಣಾ ವೇದಿಕೆ, ವಾಲ್ಮೀಕಿ ನಾಯಕ ಜನಸೇನೆ, ಹೈದ್ರಾಬಾದ್‌ ಕರ್ನಾಟಕ ಗಿರಿಜನ ಸಂಘರ್ಷ ಸಮಿತಿ, ವಾಲ್ಮೀಕಿ ಯುವಕರ ಸಂಘ ಮತ್ತು ಪ್ರೇರಣ ಗೆಳೆಯರ ಬಳಗದ ಸದಸ್ಯರು ಪಾಲ್ಗೊಂಡಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !