ಹೊಸಪೇಟೆ: ಸೋಮವಾರ ಭಾರತ ಬಂದ್‌ ಅಂಗವಾಗಿ ಇಂದು ಪೆಟ್ರೋಲ್ ಬಂಕ್‌ಗಳಲ್ಲಿ ದಟ್ಟಣೆ

7

ಹೊಸಪೇಟೆ: ಸೋಮವಾರ ಭಾರತ ಬಂದ್‌ ಅಂಗವಾಗಿ ಇಂದು ಪೆಟ್ರೋಲ್ ಬಂಕ್‌ಗಳಲ್ಲಿ ದಟ್ಟಣೆ

Published:
Updated:
Deccan Herald

ಹೊಸಪೇಟೆ: ಸೋಮವಾರ ಭಾರತ ಬಂದ್‌ ಇರುವುದರಿಂದ ಭಾನುವಾರ ಸಂಜೆ ನಗರದ ಪೆಟ್ರೋಲ್‌ ಬಂಕ್‌ಗಳಲ್ಲಿ ನೂಕು ನುಗ್ಗಲು ಕಂಡು ಬಂತು.

ತರಕಾರಿ ಮಾರುಕಟ್ಟೆ ಬಳಿಯ ಉದ್ಯೋಗ ಪೆಟ್ರೋಲ್‌ ಬಂಕ್‌, ವಾಲ್ಮೀಕಿ ರಸ್ತೆಯ ಮಿಲನ್‌, ಟಿ.ಬಿ. ಡ್ಯಾಂ ರಸ್ತೆ, ಹಂಪಿ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ಗಳಲ್ಲಿ ಜನ ಸಾಲುಗಟ್ಟಿ ನಿಂತು ಇಂಧನ ತುಂಬಿಸಿಕೊಂಡರು.

‘ಭಾರತ ಬಂದ್‌ಗೆ ಕರೆ ಕೊಟ್ಟಿರುವುದರಿಂದ ಸೋಮವಾರ ಪೆಟ್ರೋಲ್‌ ಬಂಕ್‌ಗಳು ತೆರೆದಿರುವುದು ಅನುಮಾನ. ಅದರಿಂದ ಪೆಟ್ರೋಲ್‌ ಹಾಕಿಕೊಳ್ಳಲು ಬಂದಿದ್ದೇನೆ. ಬೆಳಿಗ್ಗೆ ಬೇರೆ ಊರಿಗೆ ಕೆಲಸಕ್ಕೆ ಹೋಗಬೇಕು. ಬಸ್ಸುಗಳು ಇರುವುದಿಲ್ಲ’ ಎಂದು ಇಲ್ಲಿನ ಬಸವೇಶ್ವರ ಬಡಾವಣೆಯ ನಿವಾಸಿ ಬಸವ ತಿಳಿಸಿದರು. ಅವರು ಭಾನುವಾರ ಸಂಜೆ ನಗರದ ಉದ್ಯೋಗ ಪೆಟ್ರೋಲ್‌ ಬಂಕ್‌ಗೆ ಬಂದಾಗ ಪತ್ರಿಕೆಯೊಂದಿಗೆ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !