ಶನಿವಾರ, ಡಿಸೆಂಬರ್ 7, 2019
22 °C
‘ಪ್ರಜಾವಾಣಿ’ ವರದಿ ಫಲಶ್ರುತಿ

ನಗರಸಭೆಯಿಂದ ಫಾಗಿಂಗ್‌ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಕೊನೆಗೂ ಎಚ್ಚೆತ್ತುಕೊಂಡಿರುವ ನಗರಸಭೆ ಶನಿವಾರದಿಂದ ನಗರದಾದ್ಯಂತ ‘ಫಾಗಿಂಗ್‌’ ಕೆಲಸ ಆರಂಭಿಸಿದೆ.

‘ಫಾಗಿಂಗ್‌’ ಮರೆತ ನಗರಸಭೆ! ಶೀರ್ಷಿಕೆ ಅಡಿಯಲ್ಲಿ ‘ಪ್ರಜಾವಾಣಿ’ ಸೆ. 12ರಂದು ಮುಖಪುಟದಲ್ಲಿ ವರದಿ ಪ್ರಕಟಿಸಿತ್ತು. ನಗರದಲ್ಲಿ ಕೆಲವೆಡೆ ತೆರೆದ ಚರಂಡಿಗಳು, ಅಪೂರ್ಣ ಕಾಮಗಾರಿಯಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದ್ದು, ಅದರಿಂದ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವರದಿ ಬೆಳಕು ಚೆಲ್ಲಿತ್ತು.

ವರದಿಗೆ ಕಣ್ಣು ತೆರೆದಿರುವ ನಗರಸಭೆ, ನಗರದ ಎಲ್ಲ ಬಡಾವಣೆಗಳಲ್ಲಿ ಫಾಗಿಂಗ್‌ ಮಾಡಿಸುತ್ತಿದೆ. 

ಪ್ರತಿಕ್ರಿಯಿಸಿ (+)