‘ಸಸಿ, ಪುಸ್ತಕ ವಿತರಣೆ ಆದ್ಯತೆ ಆಗಲಿ’

7
ಸಮಾಜ ವಿಜ್ಞಾನ ವಿಚಾರ ವೇದಿಕೆಯ ಪ್ರಥಮ ವಾರ್ಷಿಕೋತ್ಸವ

‘ಸಸಿ, ಪುಸ್ತಕ ವಿತರಣೆ ಆದ್ಯತೆ ಆಗಲಿ’

Published:
Updated:
Deccan Herald

ಬಳ್ಳಾರಿ: ‘ಸಭೆ–ಸಮಾರಂಭಗಳಲ್ಲಿ ಉತ್ತಮ ಪುಸ್ತಕ ಅಥವಾ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಭಿಪ್ರಾಯಪಟ್ಟರು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ನಡೆದ ಸಮಾಜ ವಿಜ್ಞಾನ ವಿಚಾರ ವೇದಿಕೆಯ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಕಾರ್ಯಕ್ರಮಗಳಲ್ಲಿ ಸಸಿ ನೆಡಲಾಗುತ್ತಿದೆ. ಅವು ಏನಾಗುತ್ತಿವೆ ಎಂಬುದನ್ನು ಯಾರೂ ಆಲೋಚಿಸುತ್ತಿಲ್ಲ. ಅವುಗಳ ರಕ್ಷಣೆ ಕಾರ್ಯ ನಮ್ಮಿಂದಾಗಬೇಕು. ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಹೇಳಿದರು.

ಎಮ್ಮಿಗನೂರು ಮಠದ ವಾಮದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜ ವಿಜ್ಞಾನ ವಿಚಾರ ವೇದಿಕೆಯ ಅಧ್ಯಕ್ಷ ಕೆ.ವೀರಭದ್ರಗೌಡ ಅಧ್ಯಕ್ಷತೆ ವಹಿಸಿದ್ದರು.

ಎಸ್.ಪೃಥ್ವಿರಾಜ ಲಕ್ಕಿ ಅವರು ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ದರೂರು ಪುರುಷೋತ್ತಮ ಗೌಡ(ಕೃಷಿ), ಕೆ.ಎಂ.ಮಂಜುನಾಥ(ಪತ್ರಿಕಾ), ಎಸ್.ಸಿ.ಪಾಟೀಲ(ಲಲಿತ ಕಲಾ), ಎಂ.ತಿಮ್ಮನಗೌಡ(ರಂಗಭೂಮಿ) ಹಾಗೂ ವಿನೋದ ಕರಣಂ(ಸಾಹಿತ್ಯ) ಅವರನ್ನು ಸನ್ಮಾನಿಸಿದರು.

ವೇದಿಕೆಯ ವಿವಿಧ ಘಟಕಗಳ ಅಧ್ಯಕ್ಷರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ನಾಗರಾಜ, ಉಪಸಂರಕ್ಷಣಾಧಿಕಾರಿ ಎಂ.ಎನ್.ಕಿರಣ್, ರಾಜ್ಯ ಲೆಕ್ಕ ಪತ್ರ ಇಲಾಖೆಯ ಜಂಟಿ ನಿರ್ದೇಶಕ ಎ.ಚನ್ನಪ್ಪ, ಉಪ ಪರಿಸರ ಅಧಿಕಾರಿ ಬಿ.ಸಿ.ಶಿವಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ನಿವೃತ್ತ ಪ್ರಾಚಾರ್ಯ ವೈ.ಹನುಮಂತ ರೆಡ್ಡಿ, ಮಾನಸಿಕ ತಜ್ಞ ಟಿ.ಆರ್.ಶ್ರೀನಿವಾಸ, ಕೆ.ಹನುಂತಪ್ಪ, ಸಿ.ನಿಂಗಪ್ಪ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !