ದೇಶದಲ್ಲಿ ನೀಗದ ಬಡತನ: ವಿಷಾದ

7
ಎಸ್‌ಯುಸಿಐಸಿ ಜಿಲ್ಲಾ ಮಟ್ಟದ ಸಮ್ಮೇಳನ

ದೇಶದಲ್ಲಿ ನೀಗದ ಬಡತನ: ವಿಷಾದ

Published:
Updated:
Deccan Herald

ಬಳ್ಳಾರಿ: ‘ದೇಶದಲ್ಲಿ ದಿನವೂ ಸಾವಿರಾರು ಮಕ್ಕಳು ಅಪೌಷ್ಠಿಕತೆಯಿಂದ ಸಾಯುತ್ತಿದ್ದಾರೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರು ಇನ್ನೂ ಹೆಚ್ಚು ಶ್ರೀಮಂತರಾಗುತ್ತಿದ್ದಾರೆ’ ಎಂದು ಎಸ್‌ಯುಸಿಐಸಿ ರಾಜ್ಯ ಸಮಿತಿ ಸದಸ್ಯೆ ಕೆ.ಉಮಾ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಗಾಂಧೀಭವನದಲ್ಲಿ ಶನಿವಾರ ಎಸ್‌ಯುಸಿಐಸಿ ಜಿಲ್ಲಾ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಶ್ರೀಮಂತರ ಕಪ್ಪುಹಣ ಹೆಚ್ಚಾಗುತ್ತಿದೆ. ಅದನ್ನು ವಾಪಸು ತಂದು ಬಡವರ ಉದ್ಧಾರ ಮಾಡುವ ಮಾತನಾಡಿದ್ದ ಕೇಂದ್ರ ಸರ್ಕಾರ ತೆರಿಗೆಗಳ ತೆರಿಗೆಗಳನ್ನು ಹೇರುತ್ತಿದೆ’ ಎಂದು ಆರೋಪಿಸಿದರು.

‘ದೇಶದ ಪರಿಸ್ಥಿತಿ ಹದಗೆಟ್ಟಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲೆಲ್ಲೂ ಗುತ್ತಿಗೆ ಆಧಾರದ ಕೆಲಸವೇ ದೊರಕುತ್ತಿದೆ. ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆ, ಪಿಂಚಣಿ, ಭವಿಷ್ಯನಿಧಿಯೇ ಇಲ್ಲದ ಬದುಕು ನಿರ್ಮಾಣವಾಗುತ್ತಿದೆ’ ಎಂದು ವಿಷಾದಿಸಿದರು.

‘ಕಾರ್ಮಿಕರ ಮೇಲಿನ ಶೋಷಣೆಯನ್ನು ಸರ್ಕಾರಗಳು ಸಮರ್ಥಿಸುತ್ತಿವೆ. ಬೆಂಗಳೂರಿನಲ್ಲಿ ಪೌರಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬಳಿಕವೇ ಪಾಲಿಕೆಯು ನಾಲ್ಕು ತಿಂಗಳ ವೇತನವನ್ನು ಬಿಡುಗಡೆ ಮಾಡುವ ಅಮಾನವೀಯ ಆಡಳಿತ ನಡೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅನ್ಯಾಯ, ಅನೀತಿಗಳ ವಿರುದ್ಧ ಪ್ರಬಲ ಹೋರಾಟ ರೂಪಿಸುವ ಬದಲಿಗೆ ಅವುಗಳನ್ನೇ ಒಪ್ಪಿಕೊಳ್ಳುವ ಮನಸ್ಥಿತಿ ಬೇರು ಬಿಡುತ್ತಿದೆ. ಶಿಕ್ಷಣ ದುಬಾರಿಯಾದರೂ ಪೋಷಕರು ದನಿ ಎತ್ತುತ್ತಿಲ್ಲ’ ಎಂದು ದೂರಿದರು.

ಜಿಲ್ಲಾ ಕಾರ್ಯದರ್ಶಿ ಕೆ.ಸೋಮಶೇಖರ್‌, ಮುಖಂಡರಾದ ಮಂಜುಳಾ, ಶಾಂತಾ, ದೇವದಾಸ್‌, ಸೋಮಶೇಖರಗೌಡ , ಡಾ.ಪ್ರಮೋದ್‌, ನಾಗಲಕ್ಷ್ಮಿ ಮತ್ತು ಈಶ್ವರಿ ಪಾಲ್ಗೊಂಡಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !