‘ಸ್ವಾತಂತ್ರ್ಯ ಹೋರಾಟದ ಮಹತ್ವ ಅರಿಯಿರಿ’

7
ಸ್ವಾತಂತ್ರ್ಯ ಸ್ಮಾರಕದ ಮುಂದೆ ಹೋರಾಟದ ನೆನಪು

‘ಸ್ವಾತಂತ್ರ್ಯ ಹೋರಾಟದ ಮಹತ್ವ ಅರಿಯಿರಿ’

Published:
Updated:
Deccan Herald

ಬಳ್ಳಾರಿ: ‘ಯುವಜನರು ಸ್ವಾತಂತ್ರ್ಯ ಹೋರಾಟದ ಮಹತ್ವ ಅರಿಯಬೇಕು’ ಎಂದು ಬೆಳಗಾವಿಯ ಸ್ವಾತಂತ್ರ್ಯ ಹೋರಾಟಗಾರ ಜಿ.ಎಂ.ಮಾಳಗಿ ಸಲಹೆ ನೀಡಿದರು.

ನಗರದ ಗಾಂಧಿಭವನದಲ್ಲಿ ಗುರುವಾರ ಮಲ್ಲಸಜ್ಜನ ವ್ಯಾಯಾಮ ಶಾಲೆ ಸಮಿತಿಯ ಸ್ವಾತಂತ್ರ್ಯ ಭಾರತ-–70 ಸ್ಮಾರಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬೆಳಗಾವಿ ಜಿಲ್ಲೆಯ ಉದುಲಿ ಗ್ರಾಮದ ಪ್ರತಿ ಮನೆಯ ಹೋರಾಟಗಾರರೂ ಹೋರಾಟದಲ್ಲಿ ಜೈಲು ಸೇರಿದ್ದರು. ಆ ತ್ಯಾಗ ಜೀವನದ ಫಲವಾಗಿಯೇ ಸ್ವಾತಂತ್ರ್ಯ ದೊರಕಿದೆ ಎಂಬುದನ್ನು ಯುವಜನ ಮರೆಯಬಾರದು’ ಎಂದರು.

‘ನಮ್ಮ ಗ್ರಾಮದಲ್ಲಿ ಮಹಾತ್ಮ ಗಾಂಧೀಜಿಯವರು ಏಳು ದಿನಗಳ ಕಾಲ ವಾಸ್ತವ್ಯ ಹೂಡಿದ್ದು ಇಂದಿಗೂ ಮರೆಯಲಾರದ ನೆನಪು’ ಎಂದು ಪುಳಕಿತರಾದರು.

ಜಿಲ್ಲಾಧಿಕಾರಿ ವಿ.ರಾಮ್ ಪ್ರಸಾದ್‌ ಮನೋಹರ್, ‘ಗಾಂಧೀಜಿಯವರ ಅಹಿಂಸೆ, ಸತ್ಯ ಮಾರ್ಗದಲ್ಲಿ ಯುವಜನ ಮುನ್ನಡೆಯಬೇಕು. ಯಾವುದೇ ಕೆಲಸಕ್ಕೂ ಮುನ್ನ ಸೋಲಿಗೆ ಅಂಜದೆ ಸಾಧಿಸುವ ಪ್ರಯತ್ನ ಮಾಡಬೇಕು’ ಎಂದರು.

‘ದೇಶ ಕಟ್ಟುವ ಜವಾಬ್ದಾರಿ ಯುವ ಜನರ ಮೇಲಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕಾಗಿದೆ’ ಎಂದರು.

ಜ್ಯೋತಿಗೆ ಸ್ವಾಗತ: ಸ್ಮಾರಕದ ಉದ್ಘಾಟನೆ ಪ್ರಯುಕ್ತ ಹಂಪಿಯ ಭುವನೇಶ್ವರಿ ದೇವಸ್ಥಾನದಿಂದ ಮಲ್ಲಸಜ್ಜನ ವ್ಯಾಯಾಮ ಶಾಲೆಯ ವಿದ್ಯಾರ್ಥಿಗಳು ತಂದ ಸ್ವಾತಂತ್ರ್ಯ ಜ್ಯೋತಿಯನ್ನು ಮುಖಂಡರು ಸ್ವಾಗತಿಸಿದರು. ಬಳಿಕ ಮಹರ್ಷಿ ಬುಲುಸು ಸಾಂಬಮೂರ್ತಿ ಮೈದಾನದಲ್ಲಿ ಸ್ವಾತಂತ್ರೃ ಸ್ಮಾರಕ ಉದ್ಘಾಟನೆಗೊಂಡಿತು.

ವ್ಯಾಯಾಮ ಶಾಲೆ ಸಮಿತಿಯ ಅಧ್ಯಕ್ಷ ಡಾ.ಟೇಕೂರ್ ರಾಮನಾಥ್ ಅಧ್ಯಕ್ಷತೆ ವಹಿಸಿದ್ದರು. ಭಾರತ ಸೇವಾ ದಳದ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ.ಗುರುಸಿದ್ದಯ್ಯ ಸ್ವಾಮಿ, ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್ ಎಂ.ಎ.ಷಕೀಬ್, ಶಾಲೆಯ ಕಾರ್ಯದರ್ಶಿ ಟಿ.ಜಿ.ವಿಠ್ಠಲ್, ರವೀಂದ್ರ, ಬಾರೀಕೆರ್ ಗಣೇಶ್, ನರಸಿಂಹ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಂಗವಾಗಿ, ನಗರದ ವಿವಿಧ ಶಾಲೆಗಲ ವಿದ್ಯಾರ್ಥಿಗಳು ಬೆಳಿಗ್ಗೆ ಪ್ರಭಾತ ಪೇರಿ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !