ಹೊಸಪೇಟೆ: ಉಗ್ರಪ್ಪ ಪ್ರಚಾರ, ದೇಗುಲಕ್ಕೆ ಭೇಟಿ

ಶನಿವಾರ, ಏಪ್ರಿಲ್ 20, 2019
24 °C

ಹೊಸಪೇಟೆ: ಉಗ್ರಪ್ಪ ಪ್ರಚಾರ, ದೇಗುಲಕ್ಕೆ ಭೇಟಿ

Published:
Updated:
Prajavani

ಹೊಸಪೇಟೆ: ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪ ಶನಿವಾರ ನಗರದ ವಿವಿಧ ಕಡೆಗಳಲ್ಲಿ ಪ್ರಚಾರ ಕೈಗೊಂಡರು.

ಅನಂತಶಯನಗುಡಿ, ನೆಹರೂ ಕಾಲೊನಿಯಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಮತಯಾಚಿಸಿದರು. ಜಾತ್ರೆ ನಿಮಿತ್ತ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ನಂತರ ಕಾಲೊನಿಯಲ್ಲಿ ಓಡಾಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.

ಬಳಿಕ ಅನಂತಶಯನಗುಡಿ ಸಪ್ತಾಂಜನೇಯ ದೇಗುಲಕ್ಕೆ ಭೇಟಿ ಕೊಟ್ಟು ದರ್ಶನ ಪಡೆದರು. ಅನಂತರ ಪಕ್ಷದ ಮುಖಂಡರು, ಮತದಾರರ ಮನೆಗೆ ಹೋಗಿ ಮತ ಯಾಚಿಸಿದರು. ತಾಲ್ಲೂಕಿನ ಕಾಕುಬಾಳು ಸಮೀಪದ ಜೋಗದಲ್ಲಿನ ಮಠಕ್ಕೆ ಭೇಟಿ ಕೊಟ್ಟು ರಾಜ ಭಾರತಿ ಸ್ವಾಮೀಜಿ ಆಶೀರ್ವಾದ ಪಡೆದರು.

ಮುಖಂಡರಾದ ಗುಜ್ಜಲ್ ನಾಗರಾಜ, ನಿಂಬಗಲ್ ರಾಮಕೃಷ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !