ಶುಕ್ರವಾರ, ಅಕ್ಟೋಬರ್ 18, 2019
24 °C

ಹೊಸಪೇಟೆ ತಾಲ್ಲೂಕಿನಾದ್ಯಂತ ರಾತ್ರಿಯಿಡೀ ತುಂತುರು ಮಳೆ

Published:
Updated:

ಹೊಸಪೇಟೆ: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿಯಿಡೀ ತುಂತುರು ಮಳೆಯಾಗಿದೆ.

ಮಂಗಳವಾರ ಸಂಜೆ ಆರಂಭಗೊಂಡ ಮಳೆ ಬುಧವಾರ ಬೆಳಗಿನ ಜಾವದ ವರೆಗೆ ನಿರಂತರವಾಗಿ ಸುರಿದಿದೆ. ಬುಧವಾರ ಕೂಡ ಬಿಟ್ಟು ಬಿಟ್ಟು ಮಳೆಯಾಗಿದೆ. ಇದರಿಂದಾಗಿ ದಿನವಿಡೀ ವಾತಾವರಣ ಸಂಪೂರ್ಣ ತಂಪಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಜನರ ಓಡಾಟ ಕಡಿಮೆಯಿತ್ತು.

ಮಳೆಯಿಂದಾಗಿ ಕೆಲ ತಗ್ಗು ಪ್ರದೇಶಗಳಲ್ಲಿ, ರಸ್ತೆಯ ಬದಿಯಲ್ಲಿ ನೀರು ನಿಂತಿತ್ತು. ಜನ ಕೊಡೆಗಳನ್ನು ಆಶ್ರಯಿಸಿಕೊಂಡು ದೈನಂದಿನ ಕೆಲಸಗಳಿಗೆ ಹೋಗುವುದು ಕಂಡು ಬಂತು. ತಾಲ್ಲೂಕಿನ ಕಮಲಾಪುರ, ಹಂಪಿ, ಕಡ್ಡಿರಾಂಪುರ, ಮಲಪನಗುಡಿ, ಹೊಸಮಲಪನಗುಡಿ, ಕೊಂಡನಾಯಕನಹಳ್ಳಿ ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.

Post Comments (+)