ಗುರುವಾರ , ಜುಲೈ 29, 2021
21 °C
ಶಾಲೆ ಮುಚ್ಚಿರುವುದು ಬಾಲ್ಯವಿವಾಹಗಳ ಹೆಚ್ಚಳಕ್ಕೆ ಮುಖ್ಯ ಕಾರಣ

ಈ ವರ್ಷ 2,711 ಬಾಲ್ಯವಿವಾಹಗಳಿಗೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಈ ವರ್ಷ ರಾಜ್ಯದಲ್ಲಿ 2,711 ಬಾಲ್ಯವಿವಾಹಗಳನ್ನು ತಡೆದಿದ್ದಾರೆ. ಅಂದರೆ, ಪ್ರತಿ ಎರಡು ದಿನಕ್ಕೆ 15 ಬಾಲ್ಯವಿವಾಹಗಳಿಗೆ ‘ಬ್ರೇಕ್’ ಹಾಕಿದ್ದಾರೆ.

2019–20ನೇ ಸಾಲಿಗೆ ಹೋಲಿಸಿದರೆ, ಈ ವರ್ಷ ತಡೆದಿರುವ ವಿವಾಹಗಳ ಸಂಖ್ಯೆ ಶೇ 67ರಷ್ಟು ಹೆಚ್ಚು. ಆ ವರ್ಷ 1,623 ವಿವಾಹಗಳನ್ನು ತಡೆಯಲಾಗಿತ್ತು. 2018–19ನೇ ಸಾಲಿಗೆ ಹೋಲಿಸಿದರೆ, ಈ ವರ್ಷ ತಡೆದಿರುವ ಬಾಲ್ಯವಿವಾಹಗಳ ಸಂಖ್ಯೆ ದುಪ್ಪಟ್ಟಾಗಿದೆ.

ಶಾಲೆಗಳನ್ನು ಮುಚ್ಚಿರುವುದು ಮತ್ತು ಕೋವಿಡ್‌ ಬಿಕ್ಕಟ್ಟಿನಿಂದ ಗ್ರಾಮೀಣ ಪ್ರದೇಶಗಳಲ್ಲಿ ಬಡವರ ಆರ್ಥಿಕ ಮಟ್ಟ ಮತ್ತಷ್ಟು ಕುಸಿಯುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಅಧಿಕಾರಿಗಳು ಹೇಳುತ್ತಾರೆ. 

ಬಳ್ಳಾರಿಯಲ್ಲಿಇಂತಹ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲಿ 249 ವಿವಾಹಗಳನ್ನು ತಡೆದಿದ್ದರೆ, ಎರಡನೇ ಸ್ಥಾನದಲ್ಲಿ ಮೈಸೂರು (245) ಇದೆ. 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 100ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಹಿಂದಿನ ಎರಡು ವರ್ಷಗಳಲ್ಲಿ ಕೇವಲ 12 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಈ ವರ್ಷ 66 ಬಾಲ್ಯವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು