ನಡುರಸ್ತೆಯಲ್ಲೇ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

7
ವಿಡಿಯೊ ವೈರಲ್ * ಐವರು ಆರೋಪಿಗಳು ಪೊಲೀಸರ ವಶಕ್ಕೆ

ನಡುರಸ್ತೆಯಲ್ಲೇ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

Published:
Updated:

ಬೆಂಗಳೂರು: ಆಡುಗೋಡಿಯಲ್ಲಿ ದುಷ್ಕರ್ಮಿಗಳು, ಮನೋಜ್‌ (22) ಎಂಬುವರನ್ನು ನಡುರಸ್ತೆಯಲ್ಲೇ ಅಟ್ಟಾಡಿ‌ಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ತೀವ್ರ ಗಾಯಗೊಂಡಿರುವ ಮನೋಜ್‌ರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಸಹೋದರ ಮಂಜುನಾಥ್ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ. ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರಾಜೇಂದ್ರನಗರ ಕೊಳೆಗೇರಿ ಪ್ರದೇಶದ ನಿವಾಸಿ ಮನೋಜ್‌ ಕೂಲಿ ಕಾರ್ಮಿಕ. ಸ್ನೇಹಿತರನ್ನು ಭೇಟಿಯಾಗಲು ಸಮೀಪದ ಅಂಗಡಿಯೊಂದಕ್ಕೆ ಹೋಗಿದ್ದ. ಅದೇ ವೇಳೆ ಸ್ಥಳಕ್ಕೆ ಹೋಗಿ ಜಗಳ ತೆಗೆದಿದ್ದ ಆರೋಪಿಗಳು ಮಾರಕಾಸ್ತ್ರಗಳಿಂದ ಹೊಡೆದಿದ್ದರು. ಈ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದರು. ಆ ವಿಡಿಯೊ ವೈರಲ್‌ ಆಗಿತ್ತು.

ಹಲ್ಲೆ ಮಾಡಿದವರು ಮನೋಜ್‌ಗೆ ಪರಿಚಯಸ್ಥರು. ಅವರಿಂದಲೇ ಹೆಸರುಗಳನ್ನು ತಿಳಿದುಕೊಂಡು ಸ್ಥಳೀಯ ನಿವಾಸಿ ಕಾರ್ತಿಕ್, ಸೂರ್ಯ ಹಾಗೂ ಅವರ ಮೂವರು ಸ್ನೇಹಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆ ಸಾವಿಗೆ ಕಾರಣವೆಂದು ಕೃತ್ಯ: ಆರೋಪಿ ಸೂರ್ಯನ ಮನೆಗೆ ಇತ್ತೀಚೆಗೆ ಹೋಗಿದ್ದ ಮನೋಜ್, ಅವರ ತಂದೆ ಕಣ್ಣನ್‌ಗೆ ಬೆದರಿಕೆ ಹಾಕಿದ್ದರು. ಅದರಿಂದಾಗಿ ಭಯಗೊಂಡಿದ್ದ ಕಣ್ಣನ್, ಕೆಲವು ದಿನಗಳ ನಂತರ ಹೃದಯಾಘಾತದಿಂದ ತೀರಿಕೊಂಡಿದ್ದರು.  ಅದೇ ಸೇಡಿನಲ್ಲಿ ಸೂರ್ಯ, ಸ್ನೇಹಿತರ ಜತೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry