ಆತ್ಮವಿಶ್ವಾಸವೇ ಸಾಧನೆಗೆ ದಾರಿ: ಆಶಾ ಭೋಸಲೆ

7

ಆತ್ಮವಿಶ್ವಾಸವೇ ಸಾಧನೆಗೆ ದಾರಿ: ಆಶಾ ಭೋಸಲೆ

Published:
Updated:
ಆತ್ಮವಿಶ್ವಾಸವೇ ಸಾಧನೆಗೆ ದಾರಿ: ಆಶಾ ಭೋಸಲೆ

ಬೆಂಗಳೂರು: ‘ಆತ್ಮವಿಶ್ವಾಸ ಸಾಧನೆಗೆ ದಾರಿ. ನಿರಂತರ ಪರಿಶ್ರಮ ಮತ್ತು ಕಾಯಕ ನಿಜವಾದ ಗೌರವವನ್ನು ತಂದುಕೊಡುತ್ತವೆ' ಎಂದು ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸಲೆ ಹೇಳಿದರು.

‘ಸೌಂಡ್‌ ಆಫ್‌ ಸೈನ್ಸ್‌’ ಕಾರ್ಯಕ್ರಮದ ಪ್ರಯುಕ್ತ ವೈಟ್‌ಫಿಲ್ಡ್‌ನ ಮ್ಯಾರಿಯೇಟ್ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಗೌರವ ಸನ್ಮಾನಗಳು ಕೇವಲ ಎರಡು ದಿನಗಳ ಸಂಭ್ರಮ. ಅದಕ್ಕಾಗಿ ಹಂಬಲಿಸುವುದು ಬೇಡ. ಸಂಗೀತ ಮುಗಿಯದ ಕಲಿಕೆ. 75 ವರ್ಷಗಳ ನನ್ನ ಸಂಗೀತ ಪಯಣ ಮರೆಯುವಂಥದ್ದಲ್ಲ. ಸಂಗೀತವೇ ನನ್ನ ಪ್ಯಾಷನ್‌, ಉಸಿರು’ ಎಂದರು. 

‘ಇಂದಿನ ಸಂಗೀತ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿದ್ದು, ಹೊಸ ಆಯಾಮಗಳ ಸೃಷ್ಟಿಯೂ ಚೆನ್ನಾಗಿದೆ. ಸಂಗೀತ ಪ್ರಿಯರು ನೂರು ಕಾಲಕ್ಕೂ ಮೆಲಕು ಹಾಕುವ, ಭಾವನೆ, ಕಲ್ಪನೆ ಹಾಗೂ ಅನುಭವಗಳನ್ನು ಕಟ್ಟಿ ಕೊಡುವಂತಹ ಹಾಡುಗಳು ಹೆಚ್ಚೆಚ್ಚು ಸೃಷ್ಟಿಯಾಗಲಿ’ ಎಂದು ಯುವ ಗಾಯಕರಿಗೆ ಸಲಹೆ ನೀಡಿದರು.

‘ನನ್ನ ಸಂಗೀತ ಅಧ್ಯಯನಕ್ಕೆ ಪ್ರೇರಣಾ ಶಕ್ತಿ, ಮಾದರಿಯಾದವರು ಆಶಾ. ಅವರ ಗಾಯನ ಕ್ರಮ, ಧ್ವನಿ ಏರಿಳಿತ ಹಾಗೂ ಮಾದಕತೆಯನ್ನು ಅನುಸರಿಸಿಯೇ ಈ ಹಂತಕ್ಕೆ ಬೆಳೆದಿದ್ದೇನೆ’ ಎಂದು ಗಾಯಕಿ ಮಂಜುಳಾ ಗುರುರಾಜ್‌ ಹೇಳಿದರು.

‘ಆಶಾ ಅವರನ್ನು ನೋಡಬೇಕೆನ್ನುವ ನನ್ನ ಬಹುದಿನಗಳ ಕನಸು ಇಂದು ನನಸಾಗಿದೆ, ಅವರ ಒಂದೊಂದು ಹಾಡು ನನ್ನ ಸಂಗೀತಾಭ್ಯಾಸಕ್ಕೆ ಪಠ್ಯವಾಗಿದ್ದವು’ ಎಂದು ಗಾಯಕಿ ಬಿ.ಆರ್‌.ಛಾಯಾ ತಿಳಿಸಿದರು. 

ಸಂಗೀತ ಸಂಯೋಜಕ ಪ್ರವೀಣ ಗೋಡ್ಖಿಂಡಿ, ಗಾಯಕಿಯರಾದ ಏಕ್ತಾ, ರೀನಾ, ರಮ್ಯಾ ವಸಿಷ್ಠ, ಕನ್ನಡ ಚಿತ್ರರಂಗದ ನಟ ಅನಿರುದ್ಧ ದಂಪತಿ, ಸತ್ಯಪ್ರಕಾಶ್‌ ಉಪಸ್ಥಿತರಿ ದ್ದರು. ಸಂಜೆ, ಫಿನಿಕ್ಸ್‌ ಮಾರ್ಕೆಟ್‌ನಲ್ಲಿ ಆಶಾ ಭೋಸಲೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry