ಚರಂಡಿಗಳಿಂದ ಗಬ್ಬು ನಾತ

7

ಚರಂಡಿಗಳಿಂದ ಗಬ್ಬು ನಾತ

Published:
Updated:

ಬೆಂಗಳೂರು: ‘ಹೆಸರಘಟ್ಟ ಗ್ರಾಮದ ಚರಂಡಿಯ ಕಲುಷಿತ ನೀರು ಹರಿದು ಹೋಗದೆ ಅಲ್ಲಲ್ಲೇ ನಿಂತು ವಿಪರೀತ ಗಬ್ಬುವಾಸನೆ ಹೊರ ಹಾಕುತ್ತಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಬಗ್ಗೆ ಅಳಲು ತೋಡಿಕೊಂಡ ಗ್ರಾಮದ ನಿವಾಸಿ ಸಂತೋಷ್, ‘ಜಲಮಂಡಳಿ ನಿರ್ಮಿಸಿದ ಚರಂಡಿಯ ಕಾಲುವೆಯನ್ನು ಕಳೆದ ಐದಾರು ವರ್ಷಗಳಿಂದ ಸ್ವಚ್ಛ ಮಾಡಿಲ್ಲ. ಕಾಲುವೆಯಲ್ಲಿ ಮರ ಗಿಡಗಳ ಕೊಂಬೆ, ಕಸ ಮತ್ತು ಮಣ್ಣು ಬಿದ್ದಿದೆ. ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವಂತೆ ಅಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಾ.ಮಹೇಶ್ ಪ್ರತಿಕ್ರಿಯಿಸಿ, ‘ಚರಂಡಿ ಕಾಲುವೆಯ ಪಕ್ಕದಲ್ಲೇ ಶಾಲೆಗಳಿವೆ. ದಿನಾಲೂ ಮಕ್ಕಳು ಈ ಗಬ್ಬುವಾಸನೆಯಲ್ಲಿಯೇ ಪಾಠ ಕೇಳುವಂತಾಗಿದೆ. ಈ ವಾಸನೆಯಿಂದ ಮಕ್ಕಳ ಉಸಿರಾಟದ ಮೇಲೆ ಗಂಭೀರ ಪರಿಣಾಮ ಬೀರಲಿದೆ’ ಎಂದರು.

‘ಚರಂಡಿಯನ್ನು ತಿಂಗಳಿಗೆ ಒಂದು ಬಾರಿ ಸ್ವಚ್ಛ ಮಾಡಿದರೆ ಸಮಸ್ಯೆಯಿಲ್ಲ’ ಎಂದು ನಿವಾಸಿ ಗಂಗಾಧರಯ್ಯ ಹೇಳಿದರು.

ಜಲಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್‌ ಧನಂಜಯ, ‘ಚರಂಡಿಯನ್ನು ಸ್ವಚ್ಛ ಮಾಡಿಸುತ್ತೇವೆ’ ಎಂದರು.

‘ಹೆಸರಘಟ್ಟದ ಚರಂಡಿಯ ಕೊಳಚೆ ನೀರು ಹರಿದು ತಿಪ್ಪಗೊಂಡನಹಳ್ಳಿ ಕೆರೆ ಸೇರಿ ಆ ಪ್ರದೇಶ ಮಲಿನಗೊಂಡಿದೆ’ ಎಂಬುದು ಗ್ರಾಮಸ್ಥರ ಆಕ್ಷೇಪ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry