ಬನ್ನೇರುಘಟ್ಟ: ಅರೆನಗ್ನವಾಗಿ ಬಂದು ಹೋದ ಕಳ್ಳರು

7
ಮನೆಯಲ್ಲಿ ಕಳ್ಳತನಕ್ಕೆ ಯತ್ನ * ಬಾಗಿಲಿನ ಬೀಗ ಒಡೆಯಲಾಗದೆ ವಾಪಸ್‌

ಬನ್ನೇರುಘಟ್ಟ: ಅರೆನಗ್ನವಾಗಿ ಬಂದು ಹೋದ ಕಳ್ಳರು

Published:
Updated:

ಬೆಂಗಳೂರು: ಬನ್ನೇರುಘಟ್ಟದ ಮನೆಯೊಂದರಲ್ಲಿ ಕಳ್ಳತನ ಮಾಡಲು ಅರೆನಗ್ನವಾಗಿ ಬಂದಿದ್ದ ಮೂವರು ಕಳ್ಳರು, ಮನೆಯ ಬಾಗಿಲಿನ ಬೀಗ ಒಡೆಯಲಾಗದೆ ವಾಪಸ್‌ ಹೋಗಿದ್ದಾರೆ.

ಈ ಸಂಬಂಧ ಮನೆ ಮಾಲೀಕರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ‘ಮಾಲೀಕರು ಕುಟುಂಬ ಸದಸ್ಯರ ಜತೆಯಲ್ಲಿ ಬೇರೆ ಊರಿಗೆ ಹೋಗಿದ್ದರು. ಅದೇ ವೇಳೆಯಲ್ಲೇ ಆರೋಪಿಗಳು ಕೃತ್ಯ ಎಸಗಲು ಯತ್ನಿಸಿ ವಿಫಲರಾಗಿದ್ದಾರೆ’ ಎಂದು ಹೇಳಿದರು.

ಚಡ್ಡಿಯನ್ನಷ್ಟೇ ತೊಟ್ಟಿದ್ದ ಆರೋಪಿಗಳು, ಮೈಗೆಲ್ಲ ಎಣ್ಣೆ ಹಂಚಿಕೊಂಡಿದ್ದರು. ಜೂನ್ 7ರಂದು ರಾತ್ರಿ ಮನೆಯ ಕಾಂಪೌಂಡ್ ಜಿಗಿದು ಒಳಗೆ ಹೋಗಿದ್ದರು. ನಂತರ, ಮನೆಯ ಮುಖ್ಯ ಬಾಗಿಲು ಬಳಿ ಹೋಗಿ ಬೀಗ ಮುರಿಯಲು ಪ್ರಯತ್ನಿಸಿದ್ದರು. ಅದು ಸಾಧ್ಯವಾಗದೆ ವಾಪಸ್‌ ಹೋಗಿದ್ದಾರೆ. ಕಳ್ಳರ ಕೃತ್ಯ ಮನೆಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಾಲೀಕರು ಭಾನುವಾರ ಮನೆಗೆ ಬಂದು ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದ್ದರು. ಆಗ ಕಳ್ಳರ ಕೃತ್ಯ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

‘ಬನ್ನೇರುಘಟ್ಟದಲ್ಲಿ ಜನ ವಸತಿ ಕಡಿಮೆ. ಇದೇ ಮೊದಲ ಬಾರಿಗೆ ಕಳ್ಳರು, ಅರೆನಗ್ನವಾಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಕೆಲ ವ್ಯಕ್ತಿಗಳ ಮೇಲೆ ಅನುಮಾನವಿದ್ದು, ಅವರನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry