ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಲು ಆಗ್ರಹ

ಸಚಿವರೊಂದಿಗೆ ಚರ್ಚೆ: ಶಾಸಕ ಭರವಸೆ
Last Updated 26 ಜನವರಿ 2018, 11:11 IST
ಅಕ್ಷರ ಗಾತ್ರ

ಶಕ್ತಿನಗರ: ದೇವಸೂಗೂರಿನ ಸೂಗೂರೇಶ್ವರ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ಮಹಾದ್ವಾರಕ್ಕೆ ಹಾಕಿದ ಬೀಗ ತೆರೆಯುವಂತೆ ಆಗ್ರಹಿಸಿ ಗುರುವಾರ ವಿವಿಧ ಸಂಘಟನೆಗಳು ಸೂಗೂರೇಶ್ವರ ದೇವಸ್ಥಾನದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಶಾಲಾ ಕಾಲೇಜುಗಳ ಬೀಗ ಹಾಕಿ ಉಪವಾಸ ಧರಣಿ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳ ವಾರ್ಷಿಕ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಕಿಂಚಿತ್ತೂ ಕಾಳಜಿ ಇಲ್ಲದಂತೆ ಆಗಿದೆ. ಕೂಡಲೆ ಇಲಾಖೆ ಅಧಿಕಾರಿಗಳು ಶಾಲಾ ಕಾಲೇಜುಗಳಿಗೆ ಹಾಕಿದ ಬೀಗವನ್ನು ತೆರೆಯಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ದೇವಸ್ಥಾನದ ವ್ಯವಸ್ಥಾಪಕ ನವೀನ್‌ ಅವರಿಗೆ ಮನವಿ ಸಲ್ಲಿಸಿದರು.

ಎಐಡಿಎಸ್‌ಒ ಜಿಲ್ಲಾ ಸಮಿತಿಯ ಸದಸ್ಯ ವೇಣೇಶ, ಎಐಡಿವೈಒ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಚನ್ನಬಸವ ಜಾನೇಕಲ್, ಜಯ ಕರ್ನಾಟಕ ತಾಲ್ಲೂಕು ಸಮಿತಿ ಅಧ್ಯಕ್ಷ ಸುರೇಶ ಮಡಿವಾಳ, ಉಪಾಧ್ಯಕ್ಷ ಸೂಗಪ್ಪ ವಗ್ಗರ್‌, ದೇವಸೂಗೂರು ಸೂಗೂರೇಶ್ವರ ಯುವಕ ಮಂಡಳಿಯ ಅಧ್ಯಕ್ಷ ಸುರೇಶಗೌಡ ಮಾಲಿಪಾಟೀಲ, ಕಾರ್ಯದರ್ಶಿ ಸಿ.ಸುರೇಶಗೌಡ, ರಾಮನಗೌಡ , ಶಿಖರೇಶ್ವರ ಮಟಮಾರಿ, ಸುದೀಪ ಮರುಳಾ, ಸುರೇಶ ಮರುಳಾ, ವೀರೇಶ ಮೂಕಮನಿ, ಮಹಾದೇವಗೌಡ ಪುಂಡಾ ಹಾಗೂ ಭಜರಂಗ ದಳ ಶಕ್ತಿನಗರ ಘಟಕದ ಸಂಯೋಜಕರಾದ ವಿನೋದರಾಜ್, ನಾಗರಾಜ್ ಪಾಲ್ಗೊಂಡಿದ್ದರು.

ಬೆಂಬಲ: ಜಿಲ್ಲಾ ಗಂಗಾತಸ್ಥರ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ, ಮುಖಂಡರಾದ ಕೆ.ಶರಣಪ್ಪಕಲ್ಮಲಾ, ಹಂಪನಗೌಡ, ಸಾಂಬಶಿವ, ಕರ್ನಾಟಕ ರಕ್ಷಣಾ ವೇದಿಕೆಯ (ನಾರಯಣಗೌಡ ಬಣ) ಜಿಲ್ಲಾಧ್ಯಕ್ಷ ವಿನೋದರೆಡ್ಡಿ ,ಎಐಡಿಎಸ್‌ಒ,ಎಐಡಿವೈಒ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಭೇಟಿ: ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಅನಿರ್ದಿಷ್ಟ ಉಪವಾಸ ಧರಣಿ ಸ್ಥಳಕ್ಕೆ ತಹಶೀಲ್ದಾರ ಶಿವಾನಂದ ಸಾಗರ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು. ಐದು ದಿನಗಳಿಂದ ಆರಂಭಿಸಿದ ಉಪವಾಸ ಧರಣಿಯಲ್ಲಿ 9 ಸಿಬ್ಬಂದಿ ಅಸ್ವಸ್ಥರಾಗಿದ್ದಾರೆ.ಈವರೆಗೂ ಜಿಲ್ಲಾಧಿಕಾರಿ ಭೇಟಿ ನೀಡಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕನಿಷ್ಠ ವೇತನ ಪಾವತಿಸಬೇಕು ಹಾಗೂ ನೇಮಕಾತಿ ಆದೇಶ ಹೊರಡಿಸಬೇಕು ಎಂಬ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದ ಪರಿಣಾಮ ಅಧಿಕಾರಿಗಳು ಹಿಂದಿರುಗಿದರು.

ನಂತರ ತಹಶೀಲ್ದಾರ ಶಿವಾನಂದ ಸಾಗರ ಅವರು ಪ್ರಜಾವಾಣಿಯೊಂದಿಗೆ ಮಾತನಾಡಿ, ಶಾಲಾ ಕಾಲೇಜುಗಳಿಗೆ ಹಾಕಿದ ಬೀಗ ತೆರೆದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಇನ್ನೆರಡು ದಿನಗಳವರೆಗೆ ಕಾಲಾವಕಾಶ ನೀಡಿದ್ದು ಶಾಲೆ ಹಾಕಿದ ಬೀಗ ತೆಗೆಯದಿದ್ದರೆ , ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT