ಬೆಂಗಳೂರು: ಕೈಗಾರಿಕಾ ಉಪ್ಪು ಎಂದು ನಮೂದಿಸಿ ಪೊಟ್ಯಾಷಿಯಂ ಕ್ಲೋರೈಡ್ (ಮ್ಯೂರಿಯೇಟ್ ಆಫ್ ಪೊಟ್ಯಾಷ್) ವಿದೇಶಕ್ಕೆ ರಫ್ತು
ಮಾಡಿದ ದಂಪತಿಗೆ ನಗರದ ಸಿಬಿಐ ವಿಶೇಷ ನ್ಯಾಯಾಲಯ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ ₹ 1.40 ಲಕ್ಷ ದಂಡ ವಿಧಿಸಿದೆ.

ನಗರದಲ್ಲಿ ಬಿಲ್ವ ಲ್ಯಾಬ್ ನಡೆಸುತ್ತಿದ್ದ ದಂಪತಿ ಎನ್.ಎ. ಜಯರಾಂ ಮತ್ತು ಎನ್.ಜೆ. ಶೈಲಾ ಶಿಕ್ಷೆಗೆ ಒಳಗಾದವರು.

ನಿಯಮ ಉಲ್ಲಂಘಿಸಿ ರಸಾಯನಿಕಗಳನ್ನು ರಫ್ತು ಮಾಡಿದ್ದರಿಂದ ಕೇಂದ್ರ ಸರ್ಕಾರಕ್ಕೆ ಸುಮಾರು ₹ 61.08 ಕೋಟಿ ನಷ್ಟ ಉಂಟಾಗಿತ್ತು ಎಂದು ಆರೋಪಿಸಲಾಗಿತ್ತು.

ಈ ಇಬ್ಬರ ವಿರುದ್ಧ ವಂಚನೆ, ಅಗತ್ಯ ವಸ್ತುಗಳ ಕಾಯ್ದೆ ಮತ್ತು ರಸಗೊಬ್ಬರ ನಿಯಂತ್ರಣ ಆದೇಶ ಹಾಗೂ ರಫ್ತು ನೀತಿ ಉಲ್ಲಂಘಿಸಿದ ಆರೋಪದಲ್ಲಿ ಎಎಫ್‌ಆರ್ ದಾಖಲಿಸಿಕೊಂಡಿದ್ದ ಸಿಬಿಐ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.