ಈಗಾಗಲೇ ನೋಂದಾಯಿಸಿರುವ ಬೀದಿಬದಿ ವ್ಯಾಪಾರಿಗಳ ಹೆಸರು ಸಮೀಕ್ಷಾ ಪಟ್ಟಿಯಿಂದ ಕೈಬಿಟ್ಟಿದ್ದರೆ ಅಥವಾ ಲೋಪದೋಷ ಕಂಡುಬಂದಿದ್ದರೆ ವಲಯದ ಕಲ್ಯಾಣಾಧಿಕಾರಿಗಳ ಕಚೇರಿಯ ಜಂಟಿ ಆಯುಕ್ತರಿಗೆ (ಪೂರ್ವ) ಮನವಿ ಸಲ್ಲಿಸಬಹುದು. ಹೆಸರು ಸೇರ್ಪಡೆಗೆ ಏಳು ದಿನಗಳ ಒಳಗೆ ಲಿಖಿತ ಮನವಿ ಸಲ್ಲಿಸಲು ಸೂಚಿಸಲಾಗಿದೆ. ನಂತರ ಬರುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.