ಆದಿವಾಸಿ ಬದುಕಿಗೆ ನೆರವಾಗುವ ಯೋಜನೆ ಬೇಕು: ಸಿ.ಎಂ.ಕುಮಾರಸ್ವಾಮಿ

7

ಆದಿವಾಸಿ ಬದುಕಿಗೆ ನೆರವಾಗುವ ಯೋಜನೆ ಬೇಕು: ಸಿ.ಎಂ.ಕುಮಾರಸ್ವಾಮಿ

Published:
Updated:

ಬೆಂಗಳೂರು: ‘ಆದಿವಾಸಿಗಳ ಬದುಕಿಗೆ ನೆರವಾಗುವ ದೀರ್ಘಾವಧಿ ಯೋಜನೆಗಳನ್ನು ಸಿದ್ಧಪಡಿಸಿ ಅನುಷ್ಠಾನಕ್ಕೆ ತರಬೇಕೇ ವಿನಃ ಕೇವಲ ನಿಗಮ ಮಂಡಳಿಗಳನ್ನು ರಚಿಸುವುದಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 

ನಗರದಲ್ಲಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಆಯೋಜಿಸಿದ್ದ 24ನೇ ವಿಶ್ವ ಆದಿವಾಸಿ ದಿನಾಚರಣೆ ಹಾಗೂ ಅಲೆಮಾರಿ ಆದಿವಾಸಿಗಳ ಕಲಾಮೇಳ ಕಾರ್ಯಕ್ರಮದಲ್ಲಿ ಆದಿವಾಸಿಗಳು ಕೋರಿದ ನಿಗಮ ಮಂಡಳಿ ಸ್ಥಾನಗಳ ಬೇಡಿಕೆ ಸಂಬಂಧಿಸಿ ಅವರು ಪ್ರತಿಕ್ರಿಯಿಸಿದರು. 

‘ನಿಗಮ– ಮಂಡಳಿ ರೂಪಿಸಿ ಅದಕ್ಕೊಬ್ಬರನ್ನು ಅಧ್ಯಕ್ಷರನ್ನಾಗಿಸಿ ಕಾರು ಕೊಟ್ಟರೆ ಸಮಸ್ಯೆಗಳು ಬಗೆಹರಿಯುವುದಿಲ್ಲ. ಹಲವು ಪಂಗಡಗಳಾಗಿ ಒಡೆದು ಹೋಗಿರುವ ನೀವು ಒಟ್ಟಾಗಿ ಒಂದು ಸಮಿತಿ ರಚಿಸಿಕೊಂಡು ಬನ್ನಿ. ನಿಮ್ಮ ಬೇಡಿಕೆಗಳ ಸಾಧಕ– ಬಾಧಕಗಳ ಬಗ್ಗೆ ಚರ್ಚಿಸಿ ನಿರ್ಧರಿಸೋಣ’ ಎಂದು ಅವರು ಭರವಸೆ ನೀಡಿದರು. 

‘ಆದಿವಾಸಿ, ಬುಡಕಟ್ಟು ಜನರ ಸಮಸ್ಯೆಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಇವೆಲ್ಲವನ್ನೂ ಅರಿತಿದ್ದೇನೆ. ಒಬ್ಬ ಮುಖ್ಯಮಂತ್ರಿಯಾಗಿ ಸೇವೆ ಮಾಡಲು ಅವಕಾಶ ಕೊಡಿ’ ಎಂದು ಕೋರಿದರು. 

ತಮ್ಮ ವಿಳಂಬ ಆಗಮನದ ಕುರಿತು ಸುದ್ದಿ ಬಿತ್ತರಿಸಿದ್ದಕ್ಕೆ ಮಾಧ್ಯಮಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ‘ಮಾಧ್ಯಮಗಳ ಜತೆ ಮಾತನಾಡುವುದೇ ತಪ್ಪು ಎಂಬಂತಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !