ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೋ ಇಂಡಿಯಾ: ಸಿದ್ಧತೆಗಳ ಪರಿಶೀಲನೆ

ಯಲಹಂಕದ ವಾಯುಪಡೆ ನಿಲ್ದಾಣಕ್ಕೆ ಭೇಟಿ: ಸಿ.ಎಂ. ಜತೆ ಚರ್ಚೆ
Last Updated 5 ಡಿಸೆಂಬರ್ 2022, 21:59 IST
ಅಕ್ಷರ ಗಾತ್ರ

ಬೆಂಗಳೂರು: ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಯು ಆಯೋಜಿಸುವ ಏರೋ ಇಂಡಿಯಾದ 14ನೇ ಆವೃತ್ತಿಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ಸೋಮವಾರ ಸಿದ್ಧತೆಗಳನ್ನು ಪರಿಶೀಲಿಸಿದರು.

ನಗರದ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ಫೆ. 13ರಿಂದ 17ರವರೆಗೆ ನಡೆಸಲಿದೆ. 1996ರಿಂದ ಬೆಂಗಳೂರಿನಲ್ಲೇ ಆಯೋಜಿಸಲಾದ 13 ಯಶಸ್ವಿ ಆವೃತ್ತಿ
ಗಳೊಂದಿಗೆ 'ಪ್ರಧಾನ ಏರೋಸ್ಪೇಸ್ ಪ್ರದರ್ಶನ' ಎಂದು ಏರೋ ಇಂಡಿಯಾ ಜಾಗತಿಕವಾಗಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ.

ಜಂಟಿ ಕಾರ್ಯದರ್ಶಿ ಅನುರಾಗ್ ಬಾಜಪೇಯ್ ಮತ್ತು ರಕ್ಷಣಾ ಪ್ರದರ್ಶನ ಸಂಸ್ಥೆಯ ಸಿಇಒ ಸಿ.ಡಿ. ಅಚಲ್ ಮಲ್ಹೋತ್ರಾ, ಎಚ್‌ಎಎಲ್‌ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಿ.ಬಿ. ಅನಂತಕೃಷ್ಣನ್ ಒಳಗೊಂಡ ರಕ್ಷಣಾ ಸಚಿವಾಲಯದ ತಂಡವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರನ್ನು ಭೇಟಿ ಮಾಡಿದರು.

ನಂತರ ಈ ತಂಡವು ಯಲಹಂಕದಲ್ಲಿ ವಾಯು ಪಡೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಏರೋ ಇಂಡಿಯಾದ 14ನೇ ಆವೃತಿಗೆ ಬೆಂಗಳೂರನ್ನು ಮತ್ತೊಮ್ಮೆ ಸ್ಥಳವಾಗಿ ಆಯ್ಕೆ ಮಾಡಿದ್ದಕ್ಕಾಗಿ ಪ್ರಧಾನಿ, ರಕ್ಷಣಾ ಸಚಿವ ಮತ್ತು ರಕ್ಷಣಾ ಸಚಿವಾಲಯಕ್ಕೆ ಮುಖ್ಯಮಂತ್ರಿ ಅವರು ಧನ್ಯವಾದ ಸಲ್ಲಿಸಿದರು. ಈ ಆವೃತ್ತಿಯನ್ನು ಪ್ರಾರಂಭದಿಂದಲೂ ಅತಿ ದೊಡ್ಡದಾಗಿಸಲು ಆತಿಥೇಯ ರಾಜ್ಯದ ಸಂಪೂರ್ಣ ಬೆಂಬಲದ ಭರವಸೆಯನ್ನು ಮುಖ್ಯಮಂತ್ರಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT