ಶನಿವಾರ, ಜುಲೈ 2, 2022
25 °C

ಅಮೆಜಾನ್ ‘ಗಿಫ್ಟ್‌ ವೋಚರ್’ ಕೊಡುತ್ತೆನೆಂದು ನಿವೃತ್ತ ನೌಕರನಿಗೆ ₹5 ಲಕ್ಷ ವಂಚನೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಮೆಜಾನ್ ಆನ್‌ಲೈನ್‌ ಶಾಪಿಂಗ್ ಜಾಲತಾಣದ ಉಡುಗೊರೆ ಕೂಪನ್ (ಗಿಫ್ಟ್ ವೋಚರ್) ಹೆಸರಿನಲ್ಲಿ ನಗರದ ನಿವೃತ್ತ ನೌಕರರೊಬ್ಬರಿಂದ ₹ 5 ಲಕ್ಷ ಪಡೆದು ವಂಚಿಸಲಾಗಿದೆ.

‘ಯಲಹಂಕ ನ್ಯೂ ಟೌನ್‌ ನಿವಾಸಿಯಾಗಿರುವ 63 ವರ್ಷದ ನಿವೃತ್ತ ನೌಕರ, ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದೂರುದಾರ, ನಿವೃತ್ತಿ ಬಳಿಕ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಹೆಸರಿನಲ್ಲಿ ದೂರುದಾರರಿಗೆ ಇ–ಮೇಲ್ ಕಳುಹಿಸಿದ್ದ ವಂಚಕರು, ‘ಅಮೆಜಾನ್ ಗಿಫ್ಟ್ ವೋಚರ್ ಕಳುಹಿಸಿದ್ದೇನೆ. ಅದನ್ನು ಸ್ವೀಕರಿಸಿ’ ಎಂದಿದ್ದರು. ಅದು ನಿಜವೆಂದು ತಿಳಿದಿದ್ದ ನೌಕರ, ಇ– ಮೇಲ್‌ನಲ್ಲಿ ಉಲ್ಲೇಖಿಸಿದ್ದ ಲಿಂಕ್‌ನಲ್ಲಿ ಬ್ಯಾಂಕ್ ಖಾತೆ ಮಾಹಿತಿ ಭರ್ತಿ ಮಾಡಿದ್ದರು. ನಂತರ, ಹಂತ ಹಂತವಾಗಿ ₹ 5 ಲಕ್ಷ ಕಡಿತವಾಗಿದೆ.’

‘ಹಣ ಪಡೆದ ನಂತರ, ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ವ್ಯವಸ್ಥಾಪಕ ನಿರ್ದೇಶಕರನ್ನು ಕೇಳಿದಾಗ, ತಾವು ಸಂದೇಶ ಕಳುಹಿಸಿಲ್ಲವೆಂದು ಹೇಳಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು