ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ಪ್ರಕರಣ: ಕೇಂದ್ರ ಸಚಿವರ ಹೇಳಿಕೆಗೆ ಆಕ್ಷೇಪ

Last Updated 26 ಡಿಸೆಂಬರ್ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ಅಯೋಧ್ಯೆ ಪ್ರಕರಣ ಇತ್ಯರ್ಥಪಡಿಸಲು ತ್ವರಿತಗತಿ ನ್ಯಾಯಾಲಯ ಸ್ಥಾಪಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುತ್ತೇನೆ’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ನೀಡಿರುವ ಹೇಳಿಕೆಗೆ ಕೆಪಿಸಿಸಿ ಉಪಾಧ್ಯಕ್ಷ ಪ್ರೊ. ಬಿ.ಕೆ.ಚಂದ್ರಶೇಖರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಪ್ರಸಾದ್‌ ಒಬ್ಬ ನಾಗರಿಕರಾಗಿ ಹಾಗೆ ಹೇಳಬಹುದು. ಆದರೆ, ಕಾನೂನು ಸಚಿವರಾಗಿ ಆ ಮಾತನ್ನು ಹೇಳುವುದು ಸಲ್ಲದು. ಬೇರೆ ಬೇರೆ ರೀತಿಯಾಗಿ ಗುರುತಿಸಿಕೊಂಡಿರುವ ಬಿಜೆಪಿ ಸದಸ್ಯರು ಈ ರೀತಿ ಮಾಡಬಹುದು. ಆದರೆ, ಸಚಿವರಿಗೆ ಈ ಅವಕಾಶ ಇಲ್ಲ’ ಎಂದು ಅವರು ಹೇಳಿದ್ದಾರೆ.

‘ಬಾಬರಿ ಮಸೀದಿಯು ಆರಾಧನಾ ಸ್ಥಳವಲ್ಲ. ಅದು ಗುಲಾಮಗಿರಿಯ ಮಸೀದಿ ಎಂದು ಜರಿದಿರುವುದೂ ಆಕ್ಷೇಪಾರ್ಹ. ಸಾಂವಿಧಾನಿಕ ಹುದ್ದೆ ಹೊಂದಿದ ವ್ಯಕ್ತಿಯೊಬ್ಬರು ಸಾಮಾನ್ಯ ಕಾರ್ಯಕರ್ತನಂತೆ ಸಾರ್ವಜನಿಕವಾಗಿ ಸುಪ್ರೀಂ ಕೋರ್ಟ್‌ ಮೇಲೆ ಒತ್ತಡ ಹೇರುವುದು ಸರಿಯೇ’ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT