ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಅನುತ್ತೀರ್ಣರಾದ 2013ನೇ ಸಾಲಿನ ಪದವಿ ತರಗತಿಗಳ ಅಭ್ಯರ್ಥಿಗಳಿಗೆ ಉತ್ತೀರ್ಣರಾಗಲು ಇನ್ನೊಂದು ಅವಕಾಶ ಕಲ್ಪಿಸಲಾಗಿದೆ.

‘ಈಚೆಗೆ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೇ ತಿಂಗಳಲ್ಲಿ ಈ ಪರೀಕ್ಷೆ ನಡೆಯಲಿದೆ. ಅನುತ್ತೀರ್ಣಗೊಂಡ 8 ಸಾವಿರ ಮಂದಿಗೆ ಮತ್ತೆ ಪರೀಕ್ಷೆ ಬರೆಯುವ ಅವಕಾಶ ಇದೆ, ಆದರೆ ಇದು ಒಂದು ಬಾರಿಯ ಅವಕಾಶ ಮಾತ್ರ, ಮತ್ತೊಮ್ಮೆ ಅವಕಾಶ ಇಲ್ಲ’ ಎಂದು ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ.

‘2004ರಿಂದಲೇ ಬಾಕಿ ಉಳಿದ ಅಭ್ಯರ್ಥಿಗಳಿಗೆ ಇನ್ನೊಮ್ಮೆ ಪರೀಕ್ಷೆ ಬರೆಯುವ ಅವಕಾಶದ ಬಗ್ಗೆ ಚಿಂತನೆ
ನಡೆಯುತ್ತಿದೆಯಷ್ಟೇ, ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ನಾನು ಹೇಳಿದ್ದನ್ನು ಮಾತ್ರ ನಿಖರ ಮಾಹಿತಿ ಎಂದು ತಿಳಿಯ
ಬೇಕು’ಎಂದರು.ಮೂರು ವರ್ಷದ ಕೋರ್ಸ್ನಲ್ಲಿ ಅನುತ್ತೀರ್ಣರಾದವರಿಗೆ 3 ಬಾರಿ ಪರೀಕ್ಷೆ ಬರೆಯಲು ಅವಕಾಶವಿದ್ದರೂ 4ನೇ ಬಾರಿಯೂ ಅವಕಾಶ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.