ಬಿಬಿಎಂಪಿಯ 2023–24ನೇ ಸಾಲಿನ ಬಜೆಟ್ ಅನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಗುರುವಾರ ಮಂಡಿಸಿದರು. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತಿಯಲ್ಲಿ ಬಜೆಟ್ ಮಂಡಿಸಲಾಯಿತು. ಬಜೆಟ್‌ನ ಒಟ್ಟು ಗಾತ್ರ ₹11,163 ಕೋಟಿ ಆಗಿದ್ದರೆ, ಆಯವ್ಯಯ ಅಂದಾಜು ₹11,157 ಕೋಟಿ. ಇದು ₹6.14 ಕೋಟಿಯ ಉಳಿತಾಯ ಬಜೆಟ್. ಮೂಲಸೌಕರ್ಯ ನಿರ್ಮಾಣಕ್ಕೆ ಅಂದರೆ, ಸಾರ್ವಜನಿಕ ಕಾಮಗಾರಿಗಳಿಗೆ ಶೇ 63ರಷ್ಟು ಅನುದಾನ ತೆಗೆದಿರಿಸಿರುವುದು ಈ ಬಜೆಟ್‌ನ ಹೈಲೈಟ್.