ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಅಭಿಯಾನ: ಪ್ಲಾಸ್ಟಿಕ್‌ ಬಳಕೆ ಮಳಿಗೆಗಳಿಗೆ ಬೀಗ

Published 14 ಡಿಸೆಂಬರ್ 2023, 15:43 IST
Last Updated 14 ಡಿಸೆಂಬರ್ 2023, 15:43 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿ ನಗರ ವಲಯದಲ್ಲಿ ಏಕ ಬಳಕೆ ನಿಷೇಧಿತ ಪ್ಲಾಸ್ಟಿಕ್‌ ಅನ್ನು ಬಳಸದಂತೆ ನೀಡಲಾಗಿದ್ದ ಸೂಚನೆಯನ್ನು ಉಲ್ಲಂಘಿಸಿದ್ದ ಮಳಿಗೆಗಳಿಗೆ ಬೀಗ ಹಾಕಿ, ಬಿಬಿಎಂಪಿ ಸಿಬ್ಬಂದಿ ಸೀಲ್‌ ಹಾಕಿದ್ದಾರೆ.‌

ಘನತ್ಯಾಜ್ಯ ನಿರ್ವಹಣೆ, ಕಾಮಗಾರಿ ವಿಭಾಗದ ಎಂಜಿನಿಯರ್‌ಗಳು, ಆರೋಗ್ಯ ವಿಭಾಗದ ಸಿಬ್ಬಂದಿ, ಮಾರ್ಷಲ್‌ಗಳು ಹಾಗೂ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಆರು ಮಳಿಗೆಗಳ ಪ್ರವೇಶ ದ್ವಾರ ಮುಚ್ಚಲಾಗಿದೆ.

ಈ ಮಳಿಗೆಗಳಲ್ಲಿ ಏಕ ಬಳಕೆ ನಿಷೇಧಿತ ಪ್ಲಾಸ್ಟಿಕ್‌ ಬಳಸದಂತೆ ಈ ಹಿಂದೆ ಹಲವಾರು ಬಾರಿ ಸೂಚನೆ ನೀಡಲಾಗಿತ್ತು. ಆದರೂ ಪ್ಲಾಸ್ಟಿಕ್‌ ಬಳಸುತ್ತಿರುವುದು ದೃಢಪಟ್ಟಿರುವುದರಿಂದ ಪ್ಲಾಸ್ಟಿಕ್‌ ನಿಷೇಧ ಅಧಿಸೂಚನೆ ನಿಯಮ ಹಾಗೂ ಹಸಿರು ನ್ಯಾಯಮಂಡಳಿಯ ರಾಜ್ಯಮಟ್ಟದ ಸಮಿತಿ ನಿರ್ದೇಶನದಂತೆ ಮಳಿಗೆಗಳನ್ನು ಮುಚ್ಚಲಾಗಿದೆ ಎಂದು ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

₹44,400 ದಂಡ ವಸೂಲಿ: ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳು, ಅಂಗಡಿಗಳು ಹಾಗೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದ ಮೋರ್ ಸೇರಿದಂತೆ ಇತರೆ ಮಳಿಗೆಗಳಿಂದ ಒಟ್ಟಾರೆ ₹44,400 ವಸೂಲಿ ಮಾಡಲಾಗಿದೆ.

ಧ್ವನಿವರ್ಧಕಗಳ ಮೂಲಕ ಜಾಗೃತಿ: ಮಾರ್ಷಲ್ ವಾಹನ ಹಾಗೂ ಪ್ರತಿದಿನ ಮನೆಮನೆಗಳಿಂದ ತ್ಯಾಜ್ಯ ಸಂಗ್ರಹಣೆ ಮಾಡುವ ಆಟೋಟಿಪ್ಪರ್‌ಗಳ ಧ್ವನಿವರ್ಧಕದ ಮೂಲಕ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ಕೈಚೀಲವನ್ನು ಬಳಸದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ಯಾವ ಮಳಿಗೆಗೆ ಬೀಗ?
ಜೆ.ಪಿ. ಉದ್ಯಾನ ವಾರ್ಡ್: ಜಾಫರ್‌ ಫ್ರೂಟ್‌ ಶಾಪ್‌ ಗ್ರೀನ್ ವ್ಯಾಲಿ ಫಾರಂ ಆರ್‌.ಎಸ್‌. ಫ್ರೂಟ್ಸ್‌ ಆ್ಯಂಡ್‌ ವೆಜಿಟೇಬಲ್ಸ್‌ ಶಾಪ್‌. ರಾಜರಾಜೇಶ್ವರಿ ನಗರ ವಾರ್ಡ್‌: ಜವಹರ್‌ಲಾಲ್‌ ನೆಹರೂ ಮುಖ್ಯರಸ್ತೆಯ ಮಾತಾಜಿ ಡಿಪಾರ್ಟ್‌ಮೆಂಟಲ್‌ ಸ್ಟೋರ್ಸ್‌ ಸತೀಸ್‌ ಸ್ಟೋರ್ಸ್‌– ಸಮಸ್ತ ಪೂಜಾ ವಸ್ತುಗಳ ಭಂಡಾರ ಕನಕಶ್ರೀ ಕ್ರಿಯೇಷನ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT