ನಡುರಾತ್ರಿ ನೂತನ ಮೇಯರ್‌ ಗಂಗಾಂಬಿಕೆ ಸ್ಕೂಟರ್‌ ಸವಾರಿ

7
ಕಾಮಗಾರಿ ಪರಿಶೀಲನೆ

ನಡುರಾತ್ರಿ ನೂತನ ಮೇಯರ್‌ ಗಂಗಾಂಬಿಕೆ ಸ್ಕೂಟರ್‌ ಸವಾರಿ

Published:
Updated:

ಬೆಂಗಳೂರು: ನಗರದ ರಸ್ತೆ ಗುಂಡಿ ಮುಚ್ಚುವ ಹಾಗೂ ಜಾಹೀರಾತು ಚೌಕಟ್ಟುಗಳನ್ನು ತೆರವುಗೊಳಿಸುವ ಕಾಮಗಾರಿ ಪರಿಶೀಲನೆ ನಡೆಸಲು ನೂತನ ಮೇಯರ್‌ ಗಂಗಾಂಬಿಕೆ ಅವರು ಮಂಗಳವಾರ ನಡುರಾತ್ರಿ ಸ್ಕೂಟರ್‌ನಲ್ಲಿ ಸವಾರಿ ಹೊರಟರು.

ಆರ್‌ಟಿ ನಗರ, ಮಿಲ್ಲರ್ಸ್‌ ರಸ್ತೆ, ಕನ್ನಿಂಗ್‌ಹ್ಯಾಂ ರಸ್ತೆಗಳಲ್ಲಿ ಓಡಾಡಿ ಕಾಮಗಾರಿಗಳನ್ನು ಪರಿಶೀಲಿಸಿದರು. 

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರೆ ಮಾತ್ರ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತವೆ. ನಾನು ಮೇಯರ್‌ ಆಗಿರುವುದೇ ಜನರ ಕೆಲಸ ಮಾಡುವುದಕ್ಕಾಗಿ. ಮುಂದೆಯೂ ನಾನು ಇದೇ ರೀತಿ ಕಾರ್ಯ ನಿರ್ವಹಿಸುತ್ತೇನೆ’ ಎಂದರು.

ಬೆಳಿಗ್ಗೆ 6 ಗಂಟೆಗೆ ಮನೆಯಿಂದ ಹೊರಟಿದ್ದ ಅವರು, ಗಾಂಧಿ ಜಯಂತಿ ಹಾಗೂ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಈ ನಡುವೆ, ಹೊರಮಾವು ಪ್ರದೇಶದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸಾರ್ವಜನಿಕ ರಸ್ತೆಯನ್ನು ಅಗೆದು ಶೌಚಗುಂಡಿ ನಿರ್ಮಿಸುತ್ತಿರುವ ಬಗ್ಗೆ ಸ್ಥಳೀಯರಿಂದ ದೂರು ಬಂದಿತ್ತು. ಸ್ಥಳಕ್ಕೆ ಭೇಟಿ ನೀಡಿ ಈ ವಿವಾದವನ್ನು ಇತ್ಯರ್ಥಪಡಿಸಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !