ಬೆಂಗಳೂರು: ರಸ್ತೆಯಲ್ಲಿ ಸಾಗುವಾಗ ವಾಹನ ತಾಗಿದ ವಿಚಾರಕ್ಕೆ ಗಲಾಟೆ ನಡೆದು, ಕಾರಿನ ಬಾನೆಟ್ ಮೇಲೆ ಹತ್ತಿದ್ದ ವ್ಯಕ್ತಿಯನ್ನು ಎಳೆದೊಯ್ದು ದುಷ್ಕೃತ್ಯ ಎಸಗಲಾಗಿದೆ. ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿರುವ ಘಟನೆಯ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸರಕು ಸಾಗಣೆ ಆಟೊ ಹಾಗೂ ಕಾರು ರಸ್ತೆಯಲ್ಲಿ ಸಾಗುವಾಗ ಒಂದಕ್ಕೊಂದು ತಾಗಿದ್ದವು. ಈ ವಿಚಾರಕ್ಕೆ ಚಾಲಕರ ನಡುವೆ ವಾಗ್ವಾದ ನಡೆದಿತ್ತು. ಸರಕು ಸಾಗಣೆಯ ಆಟೊದ ಚಾಲಕ, ಕಾರಿನ ಬಾನೆಟ್ ಮೇಲೆ ಹತ್ತಿ ಕೂರುತ್ತಾರೆ. ಕಾರಿನ ಚಾಲಕ ಅವರನ್ನು 1 ಕಿ.ಮೀವರೆಗೆ ಎಳೆದೊಯ್ದು ದುಷ್ಕೃತ್ಯ ಎಸಗಿದ್ದಾರೆ.

‘ಬುಧವಾರ ಮಧ್ಯಾಹ್ನ 12.45ರ ಸುಮಾರಿಗೆ ಘಟನೆ ನಡೆದಿದೆ. ಕಾರಿನ ಸಂಖ್ಯೆ ಕೆಎ03 ಎನ್ಎನ್4501ರ ಚಾಲಕ ದುರ್ವರ್ತನೆ ತೋರಿದ್ದು, ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಟೊ ಚಾಲಕ ಅಂಗಲಾಚಿದರೂ ಕಾರು ನಿಲುಗಡೆ ಮಾಡಿಲ್ಲ. ಆರೋಪಿಯನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.