ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಫ್‌ಕ್ಲಬ್‌ ಮೇಲೆ ಸಿಸಿಬಿ ದಾಳಿ: 66 ಮಂದಿ ವಶ

Published 13 ಜನವರಿ 2024, 16:10 IST
Last Updated 13 ಜನವರಿ 2024, 16:10 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಟರ್ಫ್‌ಕ್ಲಬ್‌’ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, 66 ಮಂದಿಯನ್ನು ವಶಕ್ಕೆ ಪಡೆದು, ₹3.45 ಕೋಟಿ ಜಪ್ತಿ ಮಾಡಿ, 55 ಮೊಬೈಲ್‌ ವಶಕ್ಕೆ ಪಡೆದಿದ್ದಾರೆ.

‘9 ಮಂದಿ ತಲೆಮರೆಸಿಕೊಂಡಿದ್ದಾರೆ. 54 ಮಂದಿಗೆ ನೋಟಿಸ್‌ ನೀಡಿದ್ದು, ಕರೆದಾಗ ವಿಚಾರಣೆಗೆ ಬರಲು ಸೂಚಿಸಲಾಗಿದೆ. ವಶಕ್ಕೆ ಪಡೆದಿದ್ದವರಲ್ಲಿ ಏಳು ಮಂದಿ ಠಾಣಾ ಜಾಮೀನಿ ಮೇಲೆ ಬಿಡುಗಡೆ ಆಗಿದ್ದಾರೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಅಧಿಕೃತ ಪರವಾನಗಿ ಇಲ್ಲದೇ ಹಣ ಸಂಪಾದನೆಯ ದುರುದ್ದೇಶದಿಂದ ಕೆಲವರು, ಟರ್ಫ್‌ಕ್ಲಬ್‌ ಪರವಾಗಿರುವ ಅಧಿಕೃತ ಬುಕ್ಕಿಗಳೆಂದು ಹೇಳಿಕೊಂಡು ಅಕ್ರಮ ರೇಸ್‌ ಬೆಟ್ಟಿಂಗ್‌ ನಡೆಸುತ್ತಿದ್ದರು. ಪರವಾನಗಿ ಪಡೆದ ಏಜೆಂಟ್‌ಗಳು ಸರ್ಕಾರದ ಆದೇಶಗಳನ್ನು ಸ್ಟಾಲ್‌ನಲ್ಲಿ ಪ್ರಕಟಿಸಿರಲಿಲ್ಲ. ಲೆಕ್ಕ ನಿರ್ವಹಣೆ ಮಾಡಿರಲಿಲ್ಲ. ಪಡೆದ ಹಣಕ್ಕೆ ದಾಖಲೆ ಇರಲಿಲ್ಲ. ತೆರಿಗೆ ವಂಚನೆ  ಕುರಿತ ಮಾಹಿತಿ ಆಧರಿಸಿ ದಾಳಿ ನಡೆದಿತ್ತು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT