ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗಾಗಿ ‘ಭೂಮಿಕಾ ಕ್ಲಬ್‌’ ವೇದಿಕೆ

Last Updated 18 ಆಗಸ್ಟ್ 2022, 16:27 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರ ಜೀವನ ಶೈಲಿಯನ್ನು ಉತ್ಕೃಷ್ಟಗೊಳಿಸಲು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ವಿಶೇಷ ವೇದಿಕೆ ‘ಭೂಮಿಕಾ ಕ್ಲಬ್’ ನಿರ್ಮಿಸಿದ್ದು, ಇದೇ 26ರ ಮಧ್ಯಾಹ್ನ 2.30ಕ್ಕೆ ಈ ಕ್ಲಬ್ ಉದ್ಘಾಟನೆಯಾಗಲಿದೆ.

ಅಶೋಕ ನಗರದಲ್ಲಿರುವಸೇಂಟ್ ಜೋಸೆಫ್ಸ್‌ ಮ್ಯಾನೇಜ್ಮೆಂಟ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿಗಾಯಕಿ ಎಂ.ಡಿ. ಪಲ್ಲವಿ ಹಾಗೂ ಕಿರುತೆರೆ ಕಲಾವಿದೆ ರಂಜನಿ ರಾಘವನ್‘ಭೂಮಿಕಾ ಕ್ಲಬ್’ ಉದ್ಘಾಟಿಸಲಿದ್ದಾರೆ. ಕೂದಲು ಮತ್ತು ಚರ್ಮ ಆರೋಗ್ಯದ ಬಗ್ಗೆ ಮಣಿಪಾಲ್ ಆಸ್ಪತ್ರೆಯ ವೈದ್ಯರಾದ ಡಾ. ದೀಪಾ ಕೃಷ್ಣಮೂರ್ತಿ ಹಾಗೂ ಡಾ. ಸುಚಿಸ್ಮಿತಾ ರಾಜಮಾನ್ಯ ತಿಳಿಸಿಕೊಡಲಿದ್ದಾರೆ.

ಫ್ಯಾಷನ್ ಬಗ್ಗೆ ಶಚಿನ ಹೆಗ್ಗಾರ್, ಮೇಕಪ್‌ ಬಗ್ಗೆ ಸುಷ್ಮಾ ನಾಣಯ್ಯ ಮಾತನಾಡಲಿದ್ದಾರೆ. ತಾಜ್ ಹೋಟೆಲ್‌ನ ಬಾಣಸಿಗಆ್ಯಂಡ್ರಿಯಾ ಜುಡಿತ್ ಡಯಾಸ್ ಅವರುಅಡುಗೆ ಬಗ್ಗೆ ತಿಳಿಸಿಕೊಡಲಿದ್ದಾರೆ. ಅಶ್ವಿನಿ ರವೀಂದ್ರ ಅವರಿಂದ ಸ್ಟ್ಯಾಂಡಪ್ ಕಾಮಿಡಿ ನಡೆಯಲಿದೆ. ಹಣಕಾಸು ಮತ್ತು ಜೀವನಶೈಲಿಗೆ ಸಂಬಂಧಿಸಿದಂತೆ ತರಬೇತಿಗಳೂ ಇರಲಿವೆ. ವಿವಿಧ ಸ್ಪರ್ಧೆಗಳನ್ನೂ ನಡೆಸಲಾಗುತ್ತದೆ. ಇಲ್ಲಿ ಹೊಸ ಸ್ನೇಹಿತರ ಸಂಗಮಕ್ಕೆ ಅವಕಾಶವಿದ್ದು, ಹರಟೆ, ಉಪಾಹಾರವೂ ಇರಲಿದೆ.

ಸ್ಮೂರ್ ಚಾಕಲೇಟ್‌ನಿಂದ ಬಹುಮಾನ ಹಾಗೂ ಉಡುಗೊರೆ ಗೆಲ್ಲುವ ಅವಕಾಶ ಇದೆ. ಹೆಸರು ನೋಂದಾಯಿಸಿದವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ವಿವರ ಹಾಗೂ ಹೆಸರು ನೋಂದಣಿಗೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ
ವಿವರ ಹಾಗೂ ಹೆಸರು ನೋಂದಣಿಗೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT