ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶವಂತಪುರ ಮೆಟ್ರೊ ಬಳಿ ಬೈಕ್‌ಗೆ KSRTC ಬಸ್ ಡಿಕ್ಕಿ: ಲೆಕ್ಕಾಧಿಕಾರಿ ಸಾವು

ಮೃತ ನಾಗಸಂದ್ರ ನಿವಾಸಿ ರಾಜೇಂದ್ರ, ನೆಲಮಂಗಲ ಬಳಿಯ ಕಂಪನಿಯೊಂದರ ಲೆಕ್ಕಾಧಿಕಾರಿ
Published 12 ಫೆಬ್ರುವರಿ 2024, 15:05 IST
Last Updated 12 ಫೆಬ್ರುವರಿ 2024, 15:05 IST
ಅಕ್ಷರ ಗಾತ್ರ

ಬೆಂಗಳೂರು: ಯಶವಂತಪುರ ಮೆಟ್ರೊ ನಿಲ್ದಾಣ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ್ದು, ರಾಜೇಂದ್ರ (54) ಅವರು ಮೃತಪಟ್ಟಿದ್ದಾರೆ.

‘ನಾಗಸಂದ್ರ ನಿವಾಸಿ ರಾಜೇಂದ್ರ, ನೆಲಮಂಗಲ ಬಳಿಯ ಕಂಪನಿಯೊಂದರ ಲೆಕ್ಕಾಧಿಕಾರಿ. ಕೆಲಸ ನಿಮಿತ್ತ ಮೇಖ್ರಿ ವೃತ್ತದಲ್ಲಿರುವ ಜಿಎಸ್‌ಟಿ ಕಚೇರಿಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ’ ಎಂದು ಯಶವಂತಪುರ ಸಂಚಾರ ಪೊಲೀಸರು ಹೇಳಿದರು.

‘ನಾಗಸಂದ್ರದ ಮನೆಯಿಂದ ಮೇಖ್ರಿ ವೃತ್ತದ ಕಡೆಗೆ ರಾಜೇಂದ್ರ ಹೊರಟಿದ್ದರು. ತುರುವೇಕೆರೆಯಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್ ಬರುತ್ತಿತ್ತು. ಯಶವಂತಪುರ ಮೆಟ್ರೊ ನಿಲ್ದಾಣ ಬಳಿ ದ್ಚಿಚಕ್ರ ವಾಹನಕ್ಕೆ ಬಸ್‌ ಡಿಕ್ಕಿ ಹೊಡೆದಿತ್ತು.’

‘ದ್ವಿಚಕ್ರ ವಾಹನ ಸಮೇತ ಬಿದ್ದಿದ್ದ ರಾಜೇಂದ್ರ ಅವರನ್ನು 30 ಮೀಟರ್‌ವರೆಗೂ ಬಸ್‌ ಎಳೆದೊಯ್ದಿತ್ತು. ಇದರಿಂದಾಗಿ ರಾಜೇಂದ್ರ ಅವರ ತಲೆ, ಹೊಟ್ಟೆ, ಎದೆಗೆ ತೀವ್ರ ಪೆಟ್ಟಾಗಿತ್ತು. ಅವರು ಸ್ಥಳದಲ್ಲೇ ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದರು.

‘ಕೆಎಸ್‌ಆರ್‌ಟಿಸಿ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ತುರುವೇಕೆರೆ ಡಿಪೊ ಚಾಲಕ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಬಸ್ ಜಪ್ತಿ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT