ಶುಕ್ರವಾರ, ಜನವರಿ 22, 2021
27 °C

ಮದುವೆಗೆ ಕೋಟಿಗಟ್ಟಲೆ ಖರ್ಚು ಮೊದಲ ರಾತ್ರಿಯೇ ಪತ್ನಿಗೆ ಕಿರುಕುಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋಟಿಗಟ್ಟಲೆ ಖರ್ಚು ಮಾಡಿ, ಒಂದು ತಿಂಗಳ ಹಿಂದೆಯಷ್ಟೇ ಅದ್ಧೂರಿಯಾಗಿ ನಡೆದಿದ್ದ ಮದುವೆ ಈಗ ಮುರಿದು ಬಿದ್ದಿದೆ. ಮೊದಲ ರಾತ್ರಿಯಂದೇ ಪತಿ ಕಂಠಪೂರ್ತಿ ಕುಡಿದು ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿ ಎಚ್‍ಎಎಲ್ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದಾರೆ.

ದೂರು ಆಧರಿಸಿ ಎಸ್‍ಎಲ್‍ಬಿ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಭರತ್ ರೆಡ್ಡಿ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ಅಕ್ಟೋಬರ್‌ನಲ್ಲಿ ದೊಡ್ಡ ಬಾಣಸವಾಡಿಯ ಯುವತಿಯೊಂದಿಗೆ ಭರತ್ ವಿವಾಹವಾಗಿದ್ದ. ಮದುವೆಯ ಮೊದಲ ದಿನದಂದು ಪಾನಮತ್ತನಾಗಿ ಬಂದು ಪತ್ನಿ ಜೊತೆ ಜಗಳವಾಡಿದ್ದ. ಇದಕ್ಕೆ ಹೆದರಿದ ಸಂತ್ರಸ್ತೆ, ಆತನಿಂದ ಅಂತರ ಕಾಯ್ದುಕೊಂಡಿದ್ದರು. ಮರುದಿನವೂ ಇದೇ ರೀತಿ ಕುಡಿದು ಬಂದಿದ್ದ. ತನ್ನ ಮೇಲೆ ಹಲ್ಲೆಗೂ ಯತ್ನಿಸಿದ್ದಾನೆ. ಪತಿಯ ಕುಟುಂಬದವರೂ ಹಿಂಸೆ ನೀಡುತ್ತಿದ್ದಾರೆ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದರು

‘ಭರತ್‍ನ ಕೆಟ್ಟ ವರ್ತನೆಗಳ ಕುರಿತು ಅತ್ತೆ-ಮಾವನಿಗೆ ಸಂತ್ರಸ್ತೆ ವಿವರಿಸಿದ್ದರು. ಆದರೆ, ಅತ್ತೆ– ಮಾವ ವಾಮಾಚಾರ ಮಾಡಿಸಿ, ಹಿಂಸೆ ನೀಡಿದ್ದಾರೆ. ಭರತ್‍ಗೆ ಈ ಹಿಂದೆ ಬೇರೊಬ್ಬ ಯುವತಿ ಜೊತೆಗೆ ಮದುವೆಯಾಗಿದೆ. ಈ ವಿಚಾರವನ್ನು ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದಾನೆ’ ಎಂದೂ ದೂರಿನಲ್ಲಿ ತಿಳಿಸಿದ್ದಾರೆ.

‘ಮಗಳ ಮದುವೆ ಮಾಡಲು ನಿರ್ಧರಿಸಿದ್ದ ತಂದೆ, ಭರತ್ ಒಳ್ಳೆಯ ಕುಟುಂಬದವನು ಎಂದು ನಂಬಿದ್ದರು. ಅಳಿಯ ಬೇಡಿಕೆ ಇಟ್ಟಿದ್ದ ದುಬಾರಿ ಬೆಂಜ್ ಕಾರು, 5 ಕೆ.ಜಿ.ಯಷ್ಟು
ಚಿನ್ನಾಭರಣ, ₹5 ಲಕ್ಷ ಮೌಲ್ಯದ ವಜ್ರದ ಉಂಗುರ ಸೇರಿದಂತೆ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅದ್ಧೂರಿ ಮದುವೆ ನೆರವೇರಿಸಿಕೊಟ್ಟಿದ್ದರು. ಆದರೂ ವರದಕ್ಷಿಣೆಗಾಗಿ ಭರತ್
ಗಲಾಟೆ ಮಾಡಿದ್ದಾನೆ’ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು