'ರಸ್ತೆ ಗುಂಡಿ ಭರ್ತಿಯ ಲೆಕ್ಕ ಕೊಡಲಿ'

7

'ರಸ್ತೆ ಗುಂಡಿ ಭರ್ತಿಯ ಲೆಕ್ಕ ಕೊಡಲಿ'

Published:
Updated:

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಮಾಡಿರುವ ವೆಚ್ಚದ ಬಗ್ಗೆ ಬಿಬಿಎಂಪಿ ಸಾರ್ವಜನಿಕರಿಗೆ ಲೆಕ್ಕ ಕೊಡಬೇಕು’ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಒತ್ತಾಯಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಸ್ತೆ ಗುಂಡಿ ಮುಚ್ಚಲು ಹೈಕೋರ್ಟ್ ಛೀಮಾರಿ ಹಾಕಿದ ನಂತರವೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಇದೊಂದು ಸೂಕ್ಷ್ಮತೆ ಇಲ್ಲದ ದಪ್ಪ ಚರ್ಮದ ಸರ್ಕಾರ‘ ಎಂದು ಟೀಕಿಸಿದರು.

‘ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿಗೆ ಬದ್ಧತೆಯಿಲ್ಲ. ಇವರೇನು ಚಿನ್ನ-ಬೆಳ್ಳಿಯಿಂದ ರಸ್ತೆ ಗುಂಡಿ ಮುಚ್ಚಲು ಮುಂದಾಗಿದ್ದಾರೆಯೇ, ಒಂದು ರಸ್ತೆ ಗುಂಡಿ ಮುಚ್ಚಲು ₹ 3 ಲಕ್ಷ ಬೇಕಾ’ ಎಂದು ಪ್ರಶ್ನಿಸಿದರು.

 

 

 

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !