ಭಾನುವಾರ, ಆಗಸ್ಟ್ 25, 2019
26 °C
ಸಂಸ್ಥೆಯಲ್ಲಿ ಚಿಪ್‌ ರೀಡರ್‌ ಯಂತ್ರವಿಲ್ಲದೆ ನಕಲಿ ಕಾರ್ಡ್‌ ಬಳಕೆ ಸಾಧ್ಯತೆ

ಬಿಎಂಟಿಸಿ: ಹೆಸರಿಗಷ್ಟೇ ಸ್ಮಾರ್ಟ್‌ ಕಾರ್ಡ್‌

Published:
Updated:
Prajavani

ಬೆಂಗಳೂರು: ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್‌ಗಳನ್ನು ಸ್ಮಾರ್ಟ್‌ ಕಾರ್ಡ್‌ ರೀತಿಯಲ್ಲಿ ನೀಡಿರುವ ಬಿ.ಎಂ.ಟಿ.ಸಿ, ಅದನ್ನು ದೃಢೀಕರಿಸಲು ಬೇಕಿರುವ ವ್ಯವಸ್ಥೆಯನ್ನೇ ಮಾಡಿಕೊಂಡಿಲ್ಲ.

ಪಾಸ್ ದರದ ಜತೆಗೆ ಸ್ಮಾರ್ಟ್‌ ಕಾರ್ಡ್‌ ಶುಲ್ಕವಾಗಿ ₹200 ಪಡೆದಿರುವ ಬಿಎಂಟಿಸಿ, 2.4 ಲಕ್ಷ ವಿದ್ಯಾರ್ಥಿಗಳಿಗೆ ಚಿಪ್‌ ಅಳವಡಿಸಿ
ರುವ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಿಸಿದೆ. ವಿದ್ಯಾರ್ಥಿಗಳ ತರಗತಿ, ಪಾಸ್ ಅವಧಿ, ಮಾರ್ಗಕ್ಕೆ ಸಂಬಂಧಿಸಿದ ಮಾಹಿತಿ ಇದರಲ್ಲಿ ನಮೂದಾಗಿರುತ್ತದೆ. ಆದರೆ, ಈ ಚಿಪ್‌ಗಳನ್ನು ರೀಡ್‌ ಮಾಡುವ ಯಂತ್ರಗಳು ಬಿ.ಎಂ.ಟಿ.ಸಿ ಬಳಿ ಇಲ್ಲ.

‘ಇದರಿಂದಾಗಿ ವಿದ್ಯಾರ್ಥಿಗಳು ಬೇರೆ ಮಾರ್ಗಗಳಲ್ಲೂ ಸಂಚರಿಸುವ ಮೂಲಕ ದುರ್ಬಳಕೆ ಮಾಡಿಕೊಳ್ಳುವ ಮತ್ತು ನಕಲಿ ಸ್ಮಾರ್ಟ್‌ ಕಾರ್ಡ್‌ಗಳ ಹಾವಳಿ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಸಂಸ್ಥೆಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ಬಿಎಂಟಿಸಿಯಲ್ಲಿ ಸುಮಾರು 6 ಸಾವಿರ ಬಸ್‌ಗಳಿದ್ದು, ಈ ಪೈಕಿ ಬಹುತೇಕ ಬಸ್‌ಗಳಲ್ಲಿ ಇಟಿಎಂ (ಎಲೆಕ್ಟ್ರಾನಿಕ್ ಟಿಕೆಟ್ ಮೆಷಿನ್) ಬಳಸುತ್ತಿಲ್ಲ. ರಿಪೇರಿಗೆ ಹೋದ ಇ.ಟಿ.ಎಂಗಳು ವಾಪಸ್ ಬಾರದ ಕಾರಣ ಈ ಹಿಂದಿನಂತೆ ಪೂರ್ವ ಮುದ್ರಿತ ಟಿಕೆಟ್‌ಗಳನ್ನೇ ನಿರ್ವಾಹಕರು ವಿತರಿಸುತ್ತಿದ್ದಾರೆ. ಇ.ಟಿ.ಎಂಗಳು ಇಲ್ಲದ ಕಾರಣ ನಿರ್ವಾಹಕರು ಸ್ಮಾರ್ಟ್‌ ಕಾರ್ಡ್‌ಗಳನ್ನು ದೃಢೀಕರಿಸಲು ಸಾಧ್ಯವಾಗುತ್ತಿಲ್ಲ.

ಇ.ಟಿ.ಎಂ, ವಿಶೇಷ ವಾಹನ ಶೋಧ ವ್ಯವಸ್ಥೆ (ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್) ಸೇರಿದಂತೆ ಇಡೀ ‘ಚತುರ ಸಾರಿಗೆ ವ್ಯವಸ್ಥೆ’ಯನ್ನು (ಇಂಟೆಲಿಜೆಂಟ್‌ ಟ್ರಾನ್ಸ್‌ಪೋರ್ಟ್‌ ಸಿಸ್ಟಮ್‌–ಐಟಿಎಸ್‌) ನಿರ್ವಹಿಸುವ ಗುತ್ತಿಗೆಯನ್ನೂ ಟ್ರೈಮಾಕ್ಸ್‌ ಕಂಪನಿ ಪಡೆದಿತ್ತು.

‘ಈ ಕಂಪನಿ ಆರ್ಥಿಕವಾಗಿ ದಿವಾಳಿಯಾಗಿರುವ ಕಾರಣ ಕೆಲಸ–ಕಾರ್ಯ ಸ್ಥಗಿತಗೊಳಿಸಿದೆ. ಹೀಗಾಗಿ, ಇಡೀ ಐ.ಟಿ.ಎಸ್‌ ವ್ಯವಸ್ಥೆಯೇ
ಅಸ್ತವ್ಯಸ್ತವಾಗಿದೆ. ಇದೀಗ ಈ ಸಂಸ್ಥೆಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಿ ಹೊಸದಾಗಿ ಟೆಂಡರ್ ಕರೆಯಲು
ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ. ಸದ್ಯದಲ್ಲೇ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post Comments (+)