ಮಾನವ ಸಂಪನ್ಮೂಲದ ಸದುಪಯೋಗ ಅಗತ್ಯ: ಪ್ರೊ.ಎಂ.ವಿ.ರಾಜೀವ್ ಗೌಡ

7

ಮಾನವ ಸಂಪನ್ಮೂಲದ ಸದುಪಯೋಗ ಅಗತ್ಯ: ಪ್ರೊ.ಎಂ.ವಿ.ರಾಜೀವ್ ಗೌಡ

Published:
Updated:

ಬೆಂಗಳೂರು: ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಮಾನವ ಸಂಪನ್ಮೂಲ ಹೊಂದಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಪ್ರೊ.ಎಂ.ವಿ.ರಾಜೀವ್ ಗೌಡ ಹೇಳಿದರು.

ಕೆ.ಆರ್.ಪುರ ಸಮೀಪದ ಚಿಕ್ಕ ಬಸವನಪುರದ ಕೇಂಬ್ರಿಜ್‌ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭಾರತದಲ್ಲಿ ಯುವಶಕ್ತಿಯ ದೊಡ್ಡ ಸಮೂಹ ಇದ್ದು ಉತ್ತಮವಾಗಿ ಬಳಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಮುಂದುವರಿದ ಚೀನಾ, ಜಪಾನ್, ಜರ್ಮನಿ ದೇಶಗಳ ಜನಸಂಖ್ಯೆಯಲ್ಲಿ ಬಹುಪಾಲು ವಯಸ್ಸಾದವರನ್ನು ಕಾಣುತ್ತೇವೆ. ಆದರೂ ಆ ದೇಶಗಳು ಮುಂದುವರಿದಿವೆ. ಯುವಕರು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು.

ಧಾರವಾಡದಲ್ಲಿರುವ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಪ್ರೊ.ಎಸ್.ಎಂ. ಶಿವಪ್ರಸಾದ್ ಮಾತನಾಡಿ, ‘ಭಾರತ ಬೌದ್ಧಿಕವಾಗಿ ಬಹು ಶ್ರೀಮಂತ ರಾಷ್ಟ್ರವಾಗಿದ್ದು, ವಿದ್ಯಾರ್ಥಿಗಳು ನ್ಯಾನೊ, ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆಯಂಥ ವಿಷಯಗಳ ಕಡೆಗೆ ಗಮನಹರಿಸಿ ಎಂದು ಸಲಹೆ ನೀಡಿದರು. ಕೇಂಬ್ರಿಜ್‌ ಶಿಕ್ಷಣ ಸಂಸ್ಥೆಯು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದು ಅತ್ಯುತ್ತಮವಾದ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದು ಕರೆ ನೀಡಿದರು.

ವಿವಿಧ ವಿಭಾಗಗಳ 700 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !