ಗುರುವಾರ , ನವೆಂಬರ್ 14, 2019
18 °C
cauvery kugu

ನಗರಕ್ಕೆ ಇಂದು 'ಕಾವೇರಿ ಕೂಗು'

Published:
Updated:

ಬೆಂಗಳೂರು: ಕಾವೇರಿ ನದಿ ಸಂರಕ್ಷಣೆಗಾಗಿ ಸದ್ಗುರು ನೇತೃತ್ವದಲ್ಲಿ ನಡೆಯುತ್ತಿರುವ ‘ಕಾವೇರಿ ಕೂಗು’ ಅಭಿಯಾನದ ಬೈಕ್ ರ‍್ಯಾಲಿ ಭಾನುವಾರ(ಸೆ.8) ನಗರಕ್ಕೆ ಪ್ರವೇಶಿಸಲಿದೆ.

ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಸಂಜೆ 5.30ಕ್ಕೆ ಸಾರ್ವಜನಿಕ ಸಭೆ ನಡೆಯಲಿದೆ. ಸದ್ಗುರು ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು,  ಆನ್‌ಲೈನ್‌ನಲ್ಲಿ(isha.co/cc_blr) ನೋಂದಣಿ ಮಾಡಿಕೊಳ್ಳಬೇಕು ಎಂದು ಈಶಾ ಫೌಂಡೇಷನ್ ತಿಳಿಸಿದೆ.

ಕಾವೇರಿ ಉಗಮ ಸ್ಥಾನ ತಲಕಾವೇರಿಯಿಂದ ಇದೇ 3ರಂದು ಹೊರಟಿರುವ ರ‍್ಯಾಲಿ, ಹುಣಸೂರು, ಮೈಸೂರು, ಮಂಡ್ಯ ಮೂಲಕ ಬೆಂಗಳೂರಿನ ಕಡೆಗೆ ಬರುತ್ತಿದೆ.

ಪ್ರತಿಕ್ರಿಯಿಸಿ (+)