ಶುಕ್ರವಾರ, ಡಿಸೆಂಬರ್ 4, 2020
24 °C

ಸಿಇಟಿ: ನ.29ಕ್ಕೆ ಸೀಟು ಹಂಚಿಕೆ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ–2020ರ ಅಡಿ ಮೊದಲನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದ್ದು, ಇದೇ 29ಕ್ಕೆ ಮೊದಲ ಪಟ್ಟಿ ಪ್ರಕಟವಾಗಲಿದೆ.

ಸೀಟ್‌ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರಗಳನ್ನು ಈಗಾಗಲೇ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಸೇರಬಯಸುವ ಕೋರ್ಸ್‌ಗಳು ಅಂದರೆ ಎಂಜಿನಿಯರಿಂಗ್, ಪಶುಸಂಗೋಪನೆ, ವಾಸ್ತುಶಿಲ್ಪಶಾಸ್ತ್ರ, ಕೃಷಿ ವಿಜ್ಞಾನ, ಬಿ. ಫಾರ್ಮಾದ ಆಯ್ಕೆಯನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಬೇಕು. ನ.22ರ ಮಧ್ಯಾಹ್ನ 2ರಿಂದ 25ರ ಬೆಳಿಗ್ಗೆ 11ರವರೆಗೆ ಈ ಆಯ್ಕೆಯನ್ನು ಮಾಡಿಕೊಳ್ಳಬೇಕು.

26ರ ಮಧ್ಯಾಹ್ನ 2ರ ನಂತರ ಅಣಕು ಅಥವಾ ಪ್ರಾಯೋಗಿಕ ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಈ ಫಲಿತಾಂಶವನ್ನು ಪರಿಶೀಲಿಸಿದ ನಂತರ, 26ರ ಸಂಜೆ 4ರಿಂದ 28ರ ಬೆಳಿಗ್ಗೆ 11ರವರೆಗೆ ವಿದ್ಯಾರ್ಥಿಗಳು ತಮ್ಮ ಆಯ್ಕೆಗಳನ್ನು ಬದಲಾಯಿಸುವ ಅಥವಾ ಸೇರಿಸುವ, ಇಲ್ಲವೆ ತೆಗೆದು ಹಾಕಲು ಅವಕಾಶವಿದೆ.

ನ.29ರ ಸಂಜೆ 4ರ ನಂತರ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಇದನ್ನು ನೋಡಿದ ನಂತರ, ಪೋಷಕರ ಜೊತೆ ಚರ್ಚಿಸಿ ಸೂಕ್ತ ಆಯ್ಕೆ ಮಾಡಿಕೊಳ್ಳಲು ನ.30ರಿಂದ ಡಿ.1ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಮೊದಲ ಆಯ್ಕೆ (ಚಾಯ್ಸ್‌ 1) ಮಾಡಿದ ಅಭ್ಯರ್ಥಿಗಳು ನ.30ರಿಂದ ಡಿ.2ರ ಅವಧಿಯಲ್ಲಿ ಶುಲ್ಕವನ್ನು ಪಾವತಿ ಮಾಡಬೇಕು. ಎಲ್ಲ ಮೂಲ ದಾಖಲೆಗಳೊಂದಿಗೆ ಡಿ.2ರ ಸಂಜೆ 5.30ರೊಳಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಕೆಇಎ ಪ್ರಕಟಣೆ ತಿಳಿಸಿದೆ.

ಪೋಷಕರೊಂದಿಗೆ ಚರ್ಚಿಸಿ: ‘ವಿದ್ಯಾರ್ಥಿಗಳು ದಾಖಲಿಸುವ ಆಯ್ಕೆಗಳನ್ನು ಪರಿಗಣಿಸಿ ಮೆರಿಟ್‌ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತದೆ. ಈ ವೇಳೆ ವಿದ್ಯಾರ್ಥಿಗಳು ನೇರವಾಗಿ ಆಪ್ಷನ್‌ಗಳನ್ನು ದಾಖಲಿಸದೆ, ತಮಗೆ ಇಷ್ಟವಿರುವ ಕೋರ್ಸುಗಳು ಮತ್ತು ಕಾಲೇಜುಗಳ ಒಂದು ಪಟ್ಟಿ ಮಾಡಿಕೊಳ್ಳಬೇಕು. ಈ ಬಗ್ಗೆ ಪೋಷಕರೊಂದಿಗೆ
ಚರ್ಚಿಸಬೇಕು.

ನಂತರವೇ ಆಪ್ಷನ್‌ಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ http://kea.kar.nic.in ನಲ್ಲಿನ ನಿಗದಿತ ಲಿಂಕ್‌ನಲ್ಲಿ ದಾಖಲಿಸಬೇಕು’ ಎಂದೂ ಪ್ರಾಧಿಕಾರ ಸೂಚಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.