‘ನಾನೊಬ್ಬ ಪೊಲೀಸ್’ ಎಂದು ಬಿಲ್‌ ಕೊಡದೆ ಐದು ತಿಂಗಳು ಊಟ ಮಾಡಿದ

7
ಹೋಟೆಲ್‌ ಸಿಬ್ಬಂದಿಗೆ ಬೆದರಿಸುತ್ತಿದ್ದ ಆರೋಪಿ

‘ನಾನೊಬ್ಬ ಪೊಲೀಸ್’ ಎಂದು ಬಿಲ್‌ ಕೊಡದೆ ಐದು ತಿಂಗಳು ಊಟ ಮಾಡಿದ

Published:
Updated:

ಬೆಂಗಳೂರು: ‘ನಾನೊಬ್ಬ ಪೊಲೀಸ್’ ಎಂದು ಹೇಳಿಕೊಂಡು ಹೋಟೆಲ್‌ನ ಸಿಬ್ಬಂದಿಯನ್ನು ಬೆದರಿಸಿ ಊಟ ಮಾಡುತ್ತಿದ್ದ ಆರೋಪದಡಿ ಕಾರ್ತಿಕ್ (೪೦) ಎಂಬುವರನ್ನು ಮಡಿವಾಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಕಾರ್ತಿಕ್, ಬೊಮ್ಮನಹಳ್ಳಿ ಬಳಿಯ ಮಾರುತಿ ನಗರದ ಪೇಯಿಂಗ್‌ ಗೆಸ್ಟ್‌ ಕಟ್ಟಡದಲ್ಲಿ ವಾಸವಿದ್ದರು. ರಸ್ತೆ ಬದಿಯಲ್ಲಿ ಬ್ಯಾಗ್‌ಗಳನ್ನು ಮಾರಾಟ ಮಾಡುತ್ತಿದ್ದರು. ಅವರ ವಿರುದ್ಧ ‘ಶರವಣ ಭವನ’ ಹೋಟೆಲ್‌ ಮಾಲೀಕ ಕಾಳರಾಜು, ದೂರು ನೀಡಿದ್ದರು. ಅದರನ್ವಯ ಕಾರ್ತಿಕ್‌ರನ್ನು ಬಂಧಿಸಿ, ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.

 ಶುಕ್ರವಾರ (ಜೂನ್ 22) ಹೋಟೆಲ್‌ಗೆ ಹೋಗಿದ್ದ ಆರೋಪಿ, ಊಟದ ಬಳಿಕ ₹25 ಸಾವಿರ ಹಣ ನೀಡುವಂತೆ ಮಾಲೀಕರನ್ನು ಒತ್ತಾಯಿಸಿದ್ದರು. ಹಣ ನೀಡಲು ಒಪ‍್ಪದಿದ್ದಾಗ ಜೀವ ಬೆದರಿಕೆ ಹಾಕಿದ್ದರು. ಆತನ ವರ್ತನೆಯಿಂದ ಅನುಮಾಗೊಂಡ ಮಾಲೀಕ ಕಾಳರಾಜು, ಠಾಣೆಗೆ ದೂರು ನೀಡಿದ್ದರು. ಹೋಟೆಲ್‌ನ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 20

  Happy
 • 3

  Amused
 • 2

  Sad
 • 1

  Frustrated
 • 5

  Angry

Comments:

0 comments

Write the first review for this !