‘ಧಾರ್ಮಿಕ ಉಗ್ರವಾದ ತೊಲಗಲಿ’

7

‘ಧಾರ್ಮಿಕ ಉಗ್ರವಾದ ತೊಲಗಲಿ’

Published:
Updated:
Deccan Herald

ಬೆಂಗಳೂರು: ಸ್ವಾತಂತ್ರ್ಯ ಚಳವಳಿಯ ಆಶಯಗಳ ಜಾರಿಗಾಗಿ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಮಂಗಳವಾರ ಸಂಜೆ 7 ಗಂಟೆಯಿಂದ ಇಡೀ ರಾತ್ರಿ ‘ಸ್ವಾತಂತ್ರ್ಯೋತ್ಸವ ಸತ್ಯಾಗ್ರಹ ಸಾಮೂಹಿಕ ಜಾಗರಣೆ’ ನಡೆಸಲಾಯಿತು.

‘ದೇಶವನ್ನು ಲೂಟಿ ಮಾಡುತ್ತಿರುವ ಮೋದಿ ಸರ್ಕಾರಕ್ಕೆ ಧಿಕ್ಕಾರ’, ‘ಸಂವಿಧಾನವನ್ನು ಸುಡುತ್ತಿರುವ ಮನುವಾದಿಗಳಿಗೆ ಧಿಕ್ಕಾರ’, ‘ರೈತ, ಕಾರ್ಮಿಕ ವಿರೋಧಿ ಸರ್ಕಾರಕ್ಕೆ ಧಿಕ್ಕಾರ’, ‘ಧಾರ್ಮಿಕ ಉಗ್ರವಾದ ತೊಲಗಲಿ’ ಎಂಬ ಘೋಷಣೆಗಳು ಪುರಭವನದಲ್ಲಿ ಮಾರ್ದನಿಸುತ್ತಿದ್ದವು.

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಧ್ವಜಾರೋಹಣ ನಡೆಸಿದರು. ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಹಿರಿಯ ರಂಗಕರ್ಮಿ ಪ್ರಸನ್ನ,‘ಸ್ವಾತಂತ್ರ್ಯ ಪೂರ್ವದ ಜಾಗರಣೆ ಇದಾಗಿದೆ. ಧಾರ್ಮಿಕ ಉಗ್ರವಾದ ದೇಶದಲ್ಲಿ ಪ್ರಬಲಗೊಳ್ಳುತ್ತಿದೆ. ಯಂತ್ರ ನಾಗರಿಕತೆಯಿಂದ ದುಡಿಯುವ ಕೈಗಳು ಕೆಲಸ ಕಳೆದುಕೊಳ್ಳುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗಂಡಾಂತರ ಬಂದೊದಗಿದೆ. ದೇಶ ಒಡೆಯುವ ಪರಿಸ್ಥಿತಿಯಿಂದ ಹೊರಬಂದು, ಒಗ್ಗಟ್ಟಾಗಿ ಉಳಿಯಬೇಕು ಎನ್ನುವ ಆಶಯ ಇಟ್ಟುಕೊಂಡು ಸಾಮೂಹಿಕ ಜಾಗರಣೆ ನಡೆಸುತ್ತಿದ್ದೇವೆ’ ಎಂದರು.

ಸ್ವಾತಂತ್ರ್ಯದ ಗಾಯನ, ಬೀದಿನಾಟಕ ರಾತ್ರಿಪೂರ್ತಿ ನಡೆಯಿತು. ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ.ಕೆ.ಹೇಮಲತಾ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !