ಭಾನುವಾರ, ಫೆಬ್ರವರಿ 23, 2020
19 °C
‘ಸ್ಟೋನಾ 2020’ಮೇಳದಲ್ಲಿ ಈಶ್ವಿಂದರ್ ಸಿಂಗ್ ಹೇಳಿಕೆ

ನೈಸರ್ಗಿಕ ಕಲ್ಲು ಉದ್ಯಮಕ್ಕೆ ಉತ್ತೇಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೀಣ್ಯದಾಸರಹಳ್ಳಿ: ‘ಜಗತ್ತಿನಾದ್ಯಂತ ನೈಸರ್ಗಿಕ ಕಲ್ಲು ಉದ್ಯಮವನ್ನು ಉತ್ತೇಜಿಸುವುದು ಮತ್ತು ಉದ್ಯಮವು ಎದುರಿಸುತ್ತಿರುವ ಸಮಸ್ಯೆ
ಗಳನ್ನು ಪರಿಹರಿಸುವುದು ಒಕ್ಕೂಟದ ಉದ್ದೇಶ' ಎಂದು ಭಾರತೀಯ ಗ್ರಾನೈಟ್‌ ಮತ್ತು ಕಲ್ಲು ಉದ್ಯಮ ಒಕ್ಕೂಟದ (ಎಫ್‌ಐಜಿಎಸ್‌ಐ) ಅಧ್ಯಕ್ಷ ಈಶ್ವಿಂದರ್ ಸಿಂಗ್ ಹೇಳಿದರು.

ನಗರದ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಎಫ್ಐಜಿಎಸ್ಐ ವತಿಯಿಂದ ಆಯೋಜಿಸಲಾಗಿದ್ದ ‘ಸ್ಟೋನಾ-2020’ ಮೇಳದಲ್ಲಿ ಅವರು ಮಾತನಾಡಿದರು.

‘ಪ್ರಪಂಚದಾದ್ಯಂತ ಉತ್ಪತ್ತಿಯಾಗುವ ಕಲ್ಲುಗಳಲ್ಲಿ ಭಾರತದ ಪಾಲು ಶೇ.27ಕ್ಕಿಂತ ಹೆಚ್ಚು ಇದೆ. ಚಪ್ಪಡಿ, ಅಂಚು ಮತ್ತು ಸ್ಮಾರಕ ಕಲ್ಲುಗಳನ್ನು 90ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ’ ಎಂದರು. 

‘ಕಲ್ಲಿನ ಉದ್ಯಮವು ಭಾರತೀಯ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ಮತ್ತು ಕೃಷಿಯ ನಂತರ ಗ್ರಾಮೀಣ ವಲಯದಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸಲಿದೆ’ ಎಂದರು.

ಭಾನುವಾರ ನಡೆದ ಮೇಳದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಭಾಗವಹಿಸಿದ್ದರು.  ದೇಶ–ವಿದೇಶಗಳ 550 ಪ್ರದರ್ಶಕರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)