ಭಾನುವಾರ, ಸೆಪ್ಟೆಂಬರ್ 15, 2019
27 °C

‘ಯೋಜನೆ, ಸ್ಪಂದನೆಯೇ ಕಾರ್ಯಾಚರಣೆಯ ತಳಹದಿ’

Published:
Updated:
Prajavani

ಬೆಂಗಳೂರು: ‘ನೈಸರ್ಗಿಕ ವಿಕೋಪ ಪರಿಸ್ಥಿತಿಯ ನಿರ್ವಹಣೆ ಮತ್ತು ಪುನರ್‌ನಿರ್ಮಾಣದಲ್ಲಿ ಸಿವಿಲ್‌ ಎಂಜಿನಿ
ಯರಿಂಗ್‌ ವಿಭಾಗದ ಪಾತ್ರ ಮಹತ್ವದ್ದು. ಸನ್ನದ್ಧ ಸ್ಥಿತಿ, ಸರಿಯಾದ ಯೋಜನೆ ಮತ್ತು ಶೀಘ್ರ ಸ್ಪಂದನೆ ರಕ್ಷಣಾ ಕಾರ್ಯಾಚರಣೆಯ ಮೂಲ ಅಂಶಗಳು’ ಎಂದು ರಾಜ್ಯ ಸರ್ಕಾರ ಪ್ರಕೃತಿ ವಿಕೋಪ ನಿರ್ವಹಣಾ ಘಟಕದ ತಾಂತ್ರಿಕ ಕಾರ್ಯದರ್ಶಿ ವಿ.ವಿ. ಪ್ರಭು ಹೇಳಿದರು.

ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿ ಯರ್‌ಗಳ ಸಂಸ್ಥೆ (ಎಸಿಸಿಇ) ನಗರದಲ್ಲಿ ಗುರುವಾರ ‘ಪ್ರಕೃತಿ ವಿಕೋಪ ನಿರ್ವಹಣಾ ಕಾರ್ಯಾಚರಣೆ’ ಕುರಿತು ಮಾತನಾಡಿದ ಅವರು, ‘ಅಗ್ನಿ ಅವಘಡಗಳು ಸಂಭವಿಸಿದ ಸಂದರ್ಭಗಳಲ್ಲಿ, ಆ ಪ್ರದೇಶದ ಸುತ್ತ–ಮುತ್ತ ನೀರಿನ ಲಭ್ಯತೆ ಎಲ್ಲಿದೆ ಎಂಬುದನ್ನು ತಿಳಿದಿರಬೇಕು’ ಎಂದರು. 

‘ಮಹಾನಗರಗಳಲ್ಲಿ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಆ ಪಾಲಿಕೆ ಆಯುಕ್ತರು ಕಾರ್ಯಾಚರಣೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ’ ಎಂದು ಹೇಳಿದರು. 

ರಾಷ್ಟ್ರೀಯ ವಿಕೋಪ ನಿರ್ವಹಣಾ ಸಂಸ್ಥೆಯ ಕಾರ್ಯಾಚರಣೆ ಮಾರ್ಗಸೂಚಿ ರಚನಾ ಸಮಿತಿಯ ಸದಸ್ಯ ಕೆ.ಕೆ. ಪ್ರದೀಪ್‌, ಎಸಿಸಿಇ ಸಂಸ್ಥೆಯ ಅಧ್ಯಕ್ಷ ರಾಜೇಶ್‌, ಕಾರ್ಯದರ್ಶಿ ಶ್ರೀಕಾಂತ್‌, ಖಜಾಂಚಿ ಸವಿನ ತೀರ್ಥಹಳ್ಳಿ, ಬೆಂಗಳೂರು ತಾಂತ್ರಿಕ ಕಾಲೇಜಿನ ಸಿವಿಲ್‌ ಎಂಜಿನಿಯರ್‌ ವಿಭಾಗದ ಮುಖ್ಯಸ್ಥ ಡಾ. ಬಾಲಕೃಷ್ಣ ಹಾಜರಿದ್ದರು.

*
ಪ್ರಕೃತಿ ವಿಕೋಪ ಅಥವಾ ದುರಂತ ಸಂಭವಿಸಿದ ವೇಳೆ ವಾಹನಗಳ ಲಭ್ಯತೆ ಮತ್ತು ಸಂಚಾರ ವ್ಯವಸ್ಥೆ, ಏಕೀಕೃತ ಸಂವಹನ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು
-ವಿ.ವಿ. ಪ್ರಭು, ಪ್ರಕೃತಿ ವಿಕೋಪ ನಿರ್ವಹಣಾ ಘಟಕದ ತಾಂತ್ರಿಕ ಕಾರ್ಯದರ್ಶಿ

Post Comments (+)