ಬೆಂಗಳೂರು: ಮನೆ ಎದುರು ಬೈಕ್ ನಿಲ್ಲಿಸುವ ವಿಚಾರವಾಗಿ ಮಾರಾಮಾರಿ ನಡೆದಿದ್ದು, ಜನಾರ್ದನ್ ಭಟ್ಟ(29) ಎಂಬು
ವವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.
‘ಯಲಹಂಕ ಠಾಣೆ ವ್ಯಾಪ್ತಿಯ ಶ್ರೀನಿವಾಸಪುರದ ಮನೆಯೊಂದರ ಮುಂದೆ ಈ ಕೊಲೆ ನಡೆದಿದೆ. ಆರೋಪಿಗಳು ಎನ್ನಲಾದ ಪಶ್ಚಿಮ ಬಂಗಾಳದ ಸುಲೇಮಾನ್ ಹಾಗೂ ರಿಜ್ವಾನ್ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಉಡುಪಿಯ ಜನಾರ್ದನ್ ಟಿ.ವಿ ದುರಸ್ತಿ ಕೆಲಸ ಮಾಡುತ್ತಿದ್ದರು. ಒಂದೂವರೆ ವರ್ಷದಿಂದ ಶ್ರೀನಿವಾಸಪುರದ ಮನೆಯಲ್ಲಿ
ವಾಸವಿದ್ದರು. ಹವಾನಿಯಂತ್ರಕ (ಎ.ಸಿ), ಫ್ರಿಜ್ ದುರಸ್ತಿ ಮಾಡುತ್ತಿದ್ದ ಸುಲೇಮಾನ್ ಹಾಗೂ ರಿಜ್ವಾನ್
ಸಹ ಅದೇ ಮನೆಯಲ್ಲಿ ನೆಲೆಸಿದ್ದರು. ಸಣ್ಣ ಪುಟ್ಟ ವಿಚಾರಕ್ಕೂ ಮೂವರೂ ಜಗಳ ಮಾಡಿ ಪರಸ್ಪರ ಹೊಡೆದಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ’ ಎಂದು ಹೇಳಿದರು.
‘ಮನೆ ಮುಂದೆ ಬೈಕ್ ನಿಲ್ಲಿಸುವ ವಿಚಾರವಾಗಿ ಮೂವರ ನಡುವೆ ಮಾರ್ಚ್ 29ರಂದು ರಾತ್ರಿ ಜಗಳ ಶುರುವಾಗಿತ್ತು. ಇದೇ ವೇಳೆಯೇ ರಿಜ್ವಾನ್ ಹಾಗೂ ಸುಲೇಮಾನ್, ಜನಾರ್ದನ್ ಮೇಲೆ ಹಲ್ಲೆ ಮಾಡಿದ್ದರು
ಕೈ– ಕಾಲುಗಳನ್ನು ವೈರ್‌ನಿಂದ ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿದ್ದರು. ನಂತರ, ಉಸಿರುಗಟ್ಟಿಸಿ ಕೊಂದು ಆರೋಪಿಗಳು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.