ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಸಾಯಿಬಾಬಾ ಮ್ಯೂಸಿಯಂ ಉದ್ಘಾಟಿಸಿದ ಸಿ.ಎಂ ಬೊಮ್ಮಾಯಿ

saibaba, CM Bommai
Last Updated 3 ನವೆಂಬರ್ 2022, 22:35 IST
ಅಕ್ಷರ ಗಾತ್ರ

ಕೆ.ಆರ್.ಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಜೀವನ ಮತ್ತು ಬೋಧನೆಗಳ ಸಂಪೂರ್ಣ ಡಿಜಿಟಲ್ ಅನುಭವ ಕೇಂದ್ರವಾದ 'ಶ್ರೀ ಸತ್ಯಸಾಯಿ ದಿವ್ಯಸ್ಮೃತಿ' ಮ್ಯೂಸಿಯಂ ಉದ್ಘಾಟಿಸಿದರು.

ವೈಟ್‌ಫೀಲ್ಡ್ ರಸ್ತೆಯ ಕಾಡುಗುಡಿಯಲ್ಲಿರುವ ಶ್ರೀ ಸತ್ಯಸಾಯಿ ಬಾಬಾ ಆಶ್ರಮದ ಬೃಂದಾವನದಲ್ಲಿ ಮ್ಯೂಸಿಯಂ ಲೋಕಾರ್ಪಣೆ ಮಾಡಿ ಮಾತನಾಡಿದರು.

‘ಸತ್ಯಸಾಯಿ ಬಾಬಾ ಅವರು ಮನುಕುಲಕ್ಕೆ ದೈವ ಮಾನವರು, ಪವಾಡ ಪುರುಷರು. ಇಲ್ಲಿಗೆ ಬಂದು ನಾನು ಪುನೀತನಾದೆ. ಮನುಷ್ಯನಿಗೆ ಸ್ವಲ್ಪವಾದರೂ ಭಕ್ತಿ-ಭಾವನೆ ತುಂಬಿರಬೇಕು. ಈ ಆಶ್ರಮ ನಿತ್ಯ ಶಾಂತಿಯುತ ಮಂದಿರವಾಗಿದ್ದು, ಇಲ್ಲಿಗೆ ಬರುವ ಭಕ್ತಿರಿಗೆ ಬಾಬಾ ಅವರು ಮಂಗಳವನ್ನುಂಟು ಮಾಡಲಿ’ ಎಂದರು.

ಶಾಸಕ ಅರವಿಂದ್ ಲಿಂಬಾವಳಿ ಮಾತನಾಡಿ, ‘ನಾನು ಚಿಕ್ಕವನಿದ್ದಾಗ ನಮ್ಮ ಗುರುಗಳು ಶಾಲೆಯಿಂದ ಇದೇ ಆಶ್ರಮಕ್ಕೆ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದರು. ಈಗ ಇದೇ ಕ್ಷೇತ್ರಕ್ಕೆ ಶಾಸಕನಾಗಿರುವುದು ನನ್ನ ಪುಣ್ಯ ಎಂದು ಭಾವಿಸುತ್ತೇನೆ’ ಎಂದರು.

ಡಿಜಿಟಲ್ ಮ್ಯೂಸಿಯಂ ಸ್ಪರ್ಶ ಗೋಡೆಗಳು, ಬಹು ಭಾಷೆಗಳ ಆಡಿಯೋ ಕ್ಲಿಪ್‌ಗಳು ಮೊದಲಾದವನ್ನು ಸಿಬ್ಬಂದಿ ಮುಖ್ಯಮಂತ್ರಿಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT